Advertisement
ವಿದ್ಯುತ್ ಜಾಲದಿಂದ 500 ಮೀ.ಗಿಂತ ಹೆಚ್ಚು ದೂರ ವಿರುವ ಕೃಷಿ ಪಂಪ್‌ಸೆಟ್‌ಗಳಿಗೆ ಸೌರ ಪಂಪ್‌ಸೆಟ್ ಅಳವಡಿಸಲು ಪಿಎಂ-ಕುಸುಮ್ ಯೋಜನೆಯಡಿ ಸಹಾಯಧನವನ್ನು ರಾಜ್ಯ ಸರಕಾರವು ಶೇ. 30 ರಿಂದ ಶೇ. 50 ಕ್ಕೆ ಹೆಚ್ಚಿಸಿದೆ. ಕೇಂದ್ರ ಸರಕಾರ ಶೇ. 30 ಹಾಗೂ ರೈತರು ಕೇವಲ ಶೇ. 20 ವಂತಿಗೆ ಭರಿಸಬೇಕಿದೆ.
Related Articles
ಕುಸುಮ್ ಸಿ ಯೋಜನೆಯಡಿ ಫೀಡರ್ ಮಟ್ಟದ ಸೋಲಾರ್ ಮೂಲಕ ರೈತರ ಹಾಲಿ ಪಂಪ್‌ಸೆಟ್ ಗಳಿಗೆ ಸೌರ ಶಕ್ತಿಯಿಂದ ವಿದ್ಯುತ್ ಸರಬರಾಜು ಮಾಡಲಾ ಗುವುದು. ಪ್ರತ್ಯೇಕ ಸೋಲಾರ್ ಪಂಪ್‌ಗ್ಳ ಬದಲಿಗೆ ಕೃಷಿ ಫೀಡರ್‌ಗಳನ್ನು ಸೌರೀಕರಣಗೊಳಿಸುವ ಯೋಜನೆ ಇದು. ಐಪಿ ಸೆಟ್‌ಗಳಿಗೆ ಸೌರವಿದ್ಯುತ್ ಮೂಲದಿಂದ ವಿದ್ಯುತ್ ಪೂರೈಸಲಾಗುವುದು. ಸ್ಥಳೀ ಯವಾಗಿ ವಿದ್ಯುತ್ ಉತ್ಪಾದನೆ ಹೆಚ್ಚುವುದರಿಂದ ರೈತರ ಅಗತ್ಯಕ್ಕೆ ತಕ್ಕಂತೆ ಹಗಲು ವಿದ್ಯುತ್ ಪೂರೈಸಲು ಸಾಧ್ಯವಾಗಲಿದೆ.
Advertisement
ಮೆಸ್ಕಾಂ ವ್ಯಾಪ್ತಿಯಲ್ಲಿ ಪ್ರಸ್ತುತ 118 ಎಕ್ರೆ ಸರಕಾರಿ ಹಾಗೂ 70 ಎಕ್ರೆ ಖಾಸಗಿ ಜಮೀನನ್ನು ಸೌರಶಕ್ತಿ ಯೋಜ ನೆಗೆ ಗುರುತಿಸಿದ್ದು, ಅಂದಾಜು 40 ಮೆ. ವ್ಯಾ. ಸೌರಶಕ್ತಿ ಉತ್ಪಾದಿಸುವ ಉದ್ದೇಶ ಹೊಂದಲಾಗಿದೆ.