ಕುಷ್ಟಗಿ: ಕರ್ತವ್ಯ ಲೋಪ, ಅಸಭ್ಯ ವರ್ತನೆ ಹಿನ್ನೆಲೆಯಲ್ಲಿ ತಾಲೂಕಿನ ಚಿಕ್ಕನಂದಿಹಾಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕನ ವಿರುದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಅಮಾನತ್ತಿನ ಕ್ರಮ ಆದೇಶಿದ್ದಾರೆ.
ಕಳೆದ ಜ.4 ರಂದು ಶಾಲೆಯ ಶಿಕ್ಷಕ ಕೃಷ್ಣೇಗೌಡ ಶಾಲೆಗೆ ಅನಧಿಕೃತ ಗೈರು ಹಾಗೂ ಶಾಲಾ ಅವಧಿಯಲ್ಲಿ ಕುಷ್ಟಗಿ ಬಸ್ ನಿಲ್ದಾಣ ಬಳಿ ಮದ್ಯ ಸೇವಿಸಿ ತೂರಾಡಿಕೊಂಡು ಬಿದ್ದು ತಲೆಗೆ ಗಾಯ ಮಾಡಿಕೊಂಡಿದ್ದ. ಸ್ಥಳೀಯರ ಸಹಾಯದಿಂದ 108 ವಾಹನದಲ್ಲಿ ಚಿಕಿತ್ಸೆಗೆ ಕರೆದೊಯ್ದಾಗ ಚಿಕಿತ್ಸೆ ನಿರಾಕರಿಸಿ ನಿರ್ಗಮಿಸಿದ್ದ. ಶಿಕ್ಷಕನ ದುರ್ವರ್ತನೆ ಹಿನ್ನೆಲೆಯಲ್ಲಿ ಉದಯವಾಣಿ ಪತ್ರಿಕೆ ಜ.5 ರ ವರದಿ ಪ್ರಕಟಿಸಿತ್ತು.
ಪ್ರಕರಣದ ಕುರಿತು ಶಿಕ್ಷಕನಿಗೆ ಎರಡು ಬಾರಿ ನೋಟೀಸ್ ಜಾರಿ ಮಾಡಿದರೂ ಸ್ವೀಕರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಶಿಕ್ಷಕ ಕೃಷ್ಣೇಗೌಡ ವಿರುದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬ್ಳೆ ಅವರು ಶಾಲೆಗೆ ಗೈರು ದುರ್ನಡತೆ ಹಿನ್ನೆಲೆಯಲ್ಲಿ ಸದರಿ ಪ್ರಕರಣ ಗಂಭೀರ ಪರಿಗಣಿಸಿ ಜ.6ರ ಆದೇಶದಲ್ಲಿ ಅಮಾನತ್ತಿನ ಕ್ರಮ ಕೈಗೊಂಡಿದ್ದಾರೆ. ಅಮಾನತುಗೊಂಡಿರುವ ಶಿಕ್ಷಕ ಜೀವನಾಂಶ ಪಡೆಯಲು ಅರ್ಹನಿದ್ದು, ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: ಬೈಕ್ ಸವಾರನ ಜೀವ ಉಳಿಸಲು ತನ್ನ ಜೀವವನ್ನೇ ಅಪಾಯಕ್ಕೊಡ್ಡಿದ ಟ್ರಕ್ ಚಾಲಕ