Advertisement

ಶಾಲೆ ಹೋಗೋ ಹೊತ್ತಿಗಾದ್ರೂ ಒಂದು ಬಸ್ ಬಿಡ್ರಿ…ಸಂಜೆ ಬೇಕಾದ್ರು ನಡ್ಕೊಂಡು ಹೋಗ್ತೀವಿ..

12:16 PM Nov 30, 2022 | sudhir |

ಕುಷ್ಟಗಿ: ಬೆಳಗ್ಗೆ ಶಾಲೇ ಹೋಗೋ ಹೊತ್ತಿಗೆ ಒಮ್ಮೆ ನಮ್ಮೂರಿಗೆ ಬಸ್ ಬಿಡ್ರೀ… ಸಂಜೆ ಶಾಲೆ ಬಿಟ್ ಮೇಲೆ ಬೇಕಾದ್ರು ನಾವು ಕಾಲ್ನಡಿಗೆಯಲ್ಲೇ ನಮ್ಮೂರಿಗೆ ಹೋಗ್ತೀವಿ.. ಇದು ಕುಷ್ಟಗಿ ತಾಲೂಕಿನ ವಣಗೇರಾ ಗ್ರಾಮದ ವಿದ್ಯಾರ್ಥಿಗಳ ಆಳಲು.

Advertisement

ವಣಗೇರಾ ಗ್ರಾಮದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು 5 ಕಿ.ಮೀ. ಅಂತರದ ತಳವಗೇರಾ ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದಾರೆ. ವಣಗೇರಾದಿಂದ ತಳವಗೇರಾ ಮಾರ್ಗವಾಗಿ ರಸ್ತೆ ಚನ್ನಾಗಿದ್ದರೂ ಈ ಒಳ‌ ಮಾರ್ಗದಲ್ಲಿ ಒಂದೇ ಒಂದು ಬಸ್ ಸೇವೆ ಇಲ್ಲ.

ಬೆಳಗ್ಗೆ ಕುಷ್ಟಗಿಯಿಂದ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ವಣಗೇರಾ ವರೆಗೆ ಬಂದು ಮತ್ತೆ ಅದೇ ಮಾರ್ಗವಾಗಿ ಕುಷ್ಟಗಿಗೆ ಹೋಗುತ್ತದೆ. ಸದ್ಯ ಈ ಬಸ್ಸನ್ನೇ ವಣಗೇರಾ ಮಾರ್ಗವಾಗಿ ತಳವಗೇರಾ ಶಾಲೆಯ ತನಕ ಬಂದರೆ ಸಂಜೆ ಶಾಲೆ ಬಿಡುವ ಸಮಯಕ್ಕೆ ತಳವಗೇರಾ ದಿಂದ ಕುಷ್ಟಗಿಗೆ ಪ್ರಯಾಣಿಸಿದರೆ ಮಕ್ಕಳಿಗೆ ಸಹಾಯವಾಗುತ್ತದೆ ಎಂದು ಮನವಿ ಮಾಡಿದ್ದರು. ಆದರೆ ಈ ಮನವಿಗೆ ಘಟಕ ವ್ಯವಸ್ಥಾಪಕರು ಸ್ಪಂಧಿಸುತ್ತಿಲ್ಲ ಹೀಗಾಗಿ ಬೆಳಗ್ಗೆ ಶಾಲಾ ಆರಂಭದ ವೇಳೆಗೆ ಕುಷ್ಟಗಿ, ವಣಗೇರಾ ಬಸ್ ಸೇವೆಯನ್ನು ತಳವಗೇರಾಕ್ಕೆ ವಿಸ್ತರಿಸಿರಿ ಸಂಜೆ ಶಾಲೆ ಬಿಟ್ಟ ಬಳಿಕ ವಣಗೇರಾಕ್ಕೆ 5 ಕಿ.ಮೀ. ನಡೆದು ಬರುತ್ತೇವೆ ಎಂದು ಕೇಳಿಕೊಂಡರು ಘಟಕ ವ್ಯವಸ್ಥಾಪಕ ಸ್ಪಷ್ಟ ಭರವಸೆ ನೀಡಿಲ್ಲ ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಉಮೇಶ ಯಾದವ್ ತಿಳಿಸಿದ್ದಾರೆ.

ಇದನ್ನೂ ಓದಿ: ಫಲಿತಾಂಶ ಬರೋವರೆಗೂ ಕಾದು ನೋಡಿ…ಗುಜರಾತ್ ನಲ್ಲಿ AAP ಖಾತೆಯನ್ನೇ ತೆರೆಯಲ್ಲ: ಶಾ

Advertisement

Udayavani is now on Telegram. Click here to join our channel and stay updated with the latest news.

Next