ಕುಷ್ಟಗಿ: ಹೊಸಪೇಟೆಯ ಹುಲಿಗಿ ಕ್ರಾಸ್ ಬಳಿ ನಡೆದ ಹೆದ್ದಾರಿ ಅಪಘಾತದಲ್ಲಿ ಕುಷ್ಟಗಿ ತಾಲೂಕಿನ ಇಬ್ಬರು ಬೈಕ್ ಸವಾರು ದುರ್ಮರಣಕ್ಕೀಡಾದ ಘಟನೆ ನಡೆದಿದೆ.
ಮೃತರನ್ನು ಕುಷ್ಟಗಿ ತಾಲೂಕಿನ ಶಾಖಾಪೂರ ಗ್ರಾಮದ ಚನ್ನಬಸವ ನವಲಹಳ್ಳಿ ಹಾಗೂ ಕೊರಡಕೇರಾ ಗ್ರಾಮದ ಮುತ್ತೇಶ ಹಿರೇಮನಿ ಎಂದು ಗುರುತಿಸಲಾಗಿದೆ.
ಈ ಇಬ್ಬರು ಸ್ನೇಹಿತರು ಕೊಪ್ಪಳಕ್ಕೆ ಹೋಗಿ ನಂತರ ಹೊಸಪೇಟೆಯ ಮೂಲಕ ಕುಷ್ಟಗಿ ಕಡೆ ಬರುವಾಗ ಹುಲಗಿ ಕ್ರಾಸ್ ಬಳಿ ಡಿವೈಡರ್ ಗೆ ಡಿಕ್ಕಿಯಾಗಿದೆ. ಈ ದುರಂತದಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಇನ್ನೊರ್ವ ಸವಾರ ಕೊಪ್ಪಳ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ.
ದುರ್ಮರಣಕ್ಕೀಡಾದ ಯುವಕರ ಶವ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ, ಬುಧವಾರ ಬೆಳಗ್ಗೆ ಶವಗಳನ್ನು ಕುಟುಂಬದವರಿಗೆ ಹಸ್ತಾಂತರಿಸುವ ಮಾಹಿತಿ ಲಭ್ಯವಾಗಿದೆ.
Related Articles
ಇದನ್ನೂ ಓದಿ: ಫೋಟೋಗ್ರಾಫರ್ ಬಸವರಾಜ್ ಹತ್ಯೆ ಪ್ರಕರಣ: ಒಡಹುಟ್ಟಿದ ಅಕ್ಕನಿಂದಲೇ ನಡೆಯಿತು ಕೃತ್ಯ