ಕುಷ್ಟಗಿ: ಮುದೇನೂರು- ತಾವರಗೇರಾ ರಸ್ತೆಯಲ್ಲಿ ಇದ್ಲಾಪೂರ ಬಳಿ ರಸ್ತೆಯ ತಿರುವಿನಲ್ಲಿ ಬೈಕ್ ಬೇವಿನ ಮರಕ್ಕೆ ಢಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತನಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಗುಳೆದಾಳು ಗ್ರಾಮದ ಮಹೇಂದ್ರ ಮಲ್ಲಪ್ಪ ಮಾಳಗಿ (17) ಮೃತ ದುರ್ದೈವಿ. ಈತ ಕಳೆದ ಮಂಗಳವಾರ ಬೆಳಗ್ಗೆ ವಿಂಡ್ ಪವರ್ ಕಂಪನಿ ಅಧಿಕಾರಿ ಸೂಚನೆಯಂತೆ ಹಿರೇಮನ್ನಾಪೂರ ವಿಂಡ್ ಪ್ಲಾಂಟ್ ನಲ್ಲಿದ್ದ ಚಾಲಕನನ್ನು ಇದ್ಲಾಪೂರ ವಿಂಡ್ ಕಂಪನಿ ಪ್ಲಾಂಟ್ ಗೆ ಕರೆದುಕೊಂಡು ಬರಲು ಬೈಕ್ ಕೊಟ್ಟಿದ್ದರು.
ಸದರಿ ಅಪ್ರಾಪ್ತ ಬೈಕ್ ಸವಾರ ಇದ್ಲಾಪೂರ ರಸ್ತೆಯ ಮಲ್ಲಿಕಾರ್ಜುನ ಬಸರಿಗಿಡ ಇವರ ಹೊಲದ ಬಳಿ ತಿರುವಿನಲ್ಲಿ ವೇಗದ ಬೈಕು ಬೇವಿನಮರಕ್ಕೆ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಮಹೇಂದ್ರ ಗಂಭೀರ ಗಾಯಗೊಂಡು ಸ್ಥಳದಲ್ಲಿ ಮೃತನಾಗಿದ್ದಾನೆ. ವಿಂಡ್ ಕಂಪನಿಯ ಅಧಿಕಾರಿಗಳ ವಿರುದ್ದ ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಯುದ್ಧಪೀಡಿತ ಉಕ್ರೇನ್‌ನಲ್ಲಿ ಈಗ ಭ್ರಷ್ಟಾಚಾರ: ಹಲವರ ಸರಣಿ ರಾಜೀನಾಮೆ