Advertisement

ಕುಷ್ಟಗಿಯಲ್ಲಿ ಬೆಳಗಿನ ಜಾವ ಅಗ್ನಿ ಅವಘಡ… ಸುಟ್ಟು ಕರಕಲಾದ ಪಿವಿಸಿ ಪೈಪ್

10:27 AM Feb 29, 2024 | Team Udayavani |

ಕುಷ್ಟಗಿ: ಪಟ್ಟಣದ ವಿದ್ಯಾನಗರದಲ್ಲಿ ಬೆಂಕಿ ಆಕಸ್ಮಿಕದಲ್ಲಿ ಪಿವಿಸಿ ಪೈಪ್ ಸುಟ್ಟಿರುವ ಘಟನೆ ಗುರುವಾರ ಬೆಳಗಿನ ಜಾವ ನಡೆದಿದೆ.

Advertisement

ಯಾರೋ ಸಿಗರೇಟ್ ಸೇದಿ ಆರಿಸದೇ ಎಸೆದ ತುಂಡಿನಿಂದ ಕಸಕ್ಕೆ ಹೊತ್ತಿಕೊಂಡ ಬೆಂಕಿ, ಟಿಎಪಿಸಿಎಂಸ್ ಗೋಡೌನ್ ಮುಂದಿದ್ದ ಪಿವಿಸಿ ಪೈಪ್ ಗಳಿಗೆ ಹೊತ್ತಿಕೊಂಡಿದೆ.

ಧಗಧಗನೇ ಹೊತ್ತಿ ಉರಿಯುವಾಗ ಸ್ಥಳೀಯರು ನೀರಿನಿಂದ ನಂದಿಸಲು ವಿಫಲ‌ ಯತ್ನಕ್ಕೆ ಬೆಂಕಿ ತಹಬಂದಿಗೆ ಬಂದಿರಲಿಲ್ಲ. ನಂತರ ಅಗ್ನಿಶಾಮಕ ವಾಹನ ಆಗಮಿಸಿ ಕ್ಷಿಪ್ರಗತಿ ಕಾರ್ಯಚರಣೆ ನಡೆಸಿ ಬೆಂಕಿ ನಂದಿಸಿತು.

ಬೆಂಕಿ ಅವಘಡದಲ್ಲಿ 30 ಸಾವಿರಕ್ಕೂ ಅಧಿಕ ಪಿವಿಸಿ ಪೈಪು ಸುಟ್ಟು ಕರಕಲಾಗಿದೆ. ಸದರಿ ಪೈಪುಗಳು ಪವನ್ ಎಲೆಕ್ಟ್ರಿಕಲ್ಸ್ ಅವರಿಗೆ ಸೇರಿದೆ. ಅಗ್ನಿಶಾಮಕ ಠಾಣಾಧಿಕಾರಿ ರಾಜು ನರಸಪ್ಪ ಅವರು ಪ್ರತಿಕ್ರಿಯಿಸಿ, ಗೋಡೌನ್ ಹೊರಗೆ ಇಟ್ಟಿದ್ದ ಪೈಪುಗಳು ಸುಟ್ಟಿದ್ದು, ಗೋಡೌನ್ ಒಳಗೆ ಬೆಂಕಿ ವ್ಯಾಪಿಸುವುದನ್ನು ನಿಯಂತ್ರಿಸಿ ಲಕ್ಷಾಂತರ ರೂ. ಬೆಲೆ ಬಾಳುವ ಪೈಪು, ಸಿಂಟೆಕ್ಸ್ ಎಲೆಕ್ಟ್ರಿಕಲ್ಸ್ ಸಾಮಾಗ್ರಿ ಹಾನಿಯಾಗದಂತೆ ರಕ್ಷಣೆ ಮಾಡಿದ್ದೇವೆ ಎಂದರು.

ಇದನ್ನೂ ಓದಿ: Tragedy: ಪಾಮ್ ಬೀಚ್ ಬಳಿ ಅಪಘಾತ… ಇಂಟೆಲ್ ನ ಮಾಜಿ ನಿರ್ದೇಶಕ ಅವತಾರ್ ಸೈನಿ ಮೃತ್ಯು

Advertisement
Advertisement

Udayavani is now on Telegram. Click here to join our channel and stay updated with the latest news.

Next