Advertisement

ಕುಷ್ಟಗಿ : ಮೇಲ್ಸೇತುವೆಗೆ ಸ್ವಾತಂತ್ರ್ಯ ಸೇನಾನಿಯ ನಾಮಫಲಕ : ದಲಿತ ಮುಖಂಡರಿಂದ ವಿರೋಧ

08:33 AM Sep 04, 2022 | Team Udayavani |

ಕುಷ್ಟಗಿ : ಕುಷ್ಟಗಿಯ ಸುವರ್ಣ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಗೆ ನಿರ್ಮಿಸಿದ ಮೇಲ್ಸೇತುವೆಗೆ ಸ್ವಾತಂತ್ರ್ಯ ಸೇನಾನಿ ಪುಂಡಲೀಕಪ್ಪ ಜ್ಞಾನಮೋಠೆ ಅವರ ನಾಮಫಲಕ ಅಳವಡಿಕೆಗೆ ದಿಡೀರ್ ವಿರೋಧ ವ್ಯಕ್ತವಾಗಿ ನಾಮಫಲಕ ಅಳವಡಿಕೆ ಕಾಮಗಾರಿಗೆ ತಡೆಯೊಡ್ಡಿದ ಪ್ರಸಂಗ ನಡೆಯಿತು.

Advertisement

ಈ ಮೇಲ್ಸೇತುವೆಗೆ 2 ಲಕ್ಷ ರೂ. ವೆಚ್ಚದಲ್ಲಿ ಮೇಲ್ಸೇತುವೆ ಪೂರ್ವ ಹಾಗೂ ಪಶ್ಚಿಮಾಭಿಮುಖವಾಗಿ ಮೇಲ್ಸೇತುವೆ ಮೇಲ ಸ್ಟೀಲ್ ಲೋಹದ ಸುವರ್ಣ ಅಕ್ಷರಗಳ ಕೆಲಸಕ್ಕೆ ನಡೆದಿತ್ತು. ಇದನ್ನು ಗಮನಿಸಿದ ದಲಿತ ಮುಖಂಡರು, ಡಾ. ಬಿ.ಆರ್. ಅಂಬೇಡ್ಕರ್ ಅಭಿಮಾನಿಗಳು 200ಕ್ಕೂ ಅಧಿಕ ಸಂಖ್ಯೆಯಲ್ಲಿ ವಿರೋಧ ವ್ಯಕ್ತಪಡಿಸಿ ನಾಮಫಲಕ ಅಳವಡಿಕೆ ಕೆಲಸ ಸ್ಥಗಿತಗೊಳಿಸಿದರು.

ಈ ಸುದ್ದಿ ತಿಳಿಯುತ್ತಿದ್ದಂತೆ ದೌಡಾಯಿಸಿದ ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ ಅವರು, ಮೇಲ್ಸೇತುವೆ ಲೋಕಾರ್ಪಣೆ ವೇಳೆ ಉಪ ಮುಖ್ಯಮಂತ್ರಿ ಆಗಿದ್ದ ಗೋವಿಂದ್ ಕಾರಜೋಳ, ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರ ಸಮಕ್ಷಮದಲ್ಲಿ ಸ್ವಾತಂತ್ರ್ಯ ಸೇನಾನಿ ಮಾಜಿ ಶಾಸಕ ಪುಂಡಲೀಕಪ್ಪ ಜ್ಞಾನಮೋಠೆ ಅವರ ಹೆಸರಿನ ನಾಮಫಲಕ ಅಳವಡಿಸುವ ಬಗ್ಗೆ ಸಮಾಜಾಯಿಷಿಗೆ ಮುಂದಾದರು.

ಆದರೆ ದಲಿತ ಮುಖಂಡರಾದ ನಾಗರಾಜ ಮೇಲಿನಮನಿ, ಪುರಸಭೆ ಸದಸ್ಯ ವಸಂತ ಮೇಲಿನಮನಿ, ಮಂಜುನಾಥ ಕಟ್ಟಿಮನಿ, ಶಿವರಾಜ್ ಕಟ್ಟಿಮನಿ ಮೊದಲಾದವರು ಪುರಸಭೆ ಅಧ್ಯಕ್ಷರೊಂದಿಗೆ ವಾಗ್ವದಕ್ಕೆ ಇಳಿದರು.

ಈ ಸ್ಥಳ ಡಾ. ಬಿ.ಆರ್. ಅಂಬೇಡ್ಕರ್ ವೃತ್ತವಾಗಿ 20 ವರ್ಷವಾಗಿದೆ. ಮೇಲ್ಸೇತುವೆ ನಿರ್ಮಾಣವಾದ ಮೇಲೆ ಕಾರಣಾಂತರಗಳಿಂದ ಮೇಲ್ಸೇತುವೆ ಮೇಲೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರು ಬರೆಸಲಾಗಿಲ್ಲ ಎಂದು ದಲಿತ ಮುಖಂಡರು ವಾದಿಸಿದರು.

Advertisement

ಇಷ್ಟಕ್ಕೆ ಸುಮ್ಮನಾಗದ ದಲಿತ ಮುಖಂಡರು ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರನ್ನು ಮೋಬೈಲ್ ನಲ್ಲಿ ಸಂಪಕರ್ಿಸಿ, ಈ ಮೇಲ್ಸೇತುವೆಗೆ ಸ್ವಾತಂತ್ರ್ಯ ಸೇನಾನಿ ಪುಂಡಲೀಕಪ್ಪ ಜ್ಞಾನಮೋಠೆ ಅವರನ್ನು ಅವಮಾನಿಸುವ ದುರುದ್ದೇಶವಿಲ್ಲ. ಆದರೆ ಕಳೆದ 20 ವರ್ಷಗಳಿಂದ ಈ ಸ್ಥಳ ಅಂಬೇಡ್ಕರ್ ವೃತ್ತವಾಗಿದೆ. ಸಂವಿಧಾನ ಸಂರಕ್ಷಣೆ ಬೃಹತ್ ಕಾರ್ಯಕ್ರಮದ ವೇಳೆ ಮೇಲ್ಸೇತುವೆ ಗೋಡೆಗಳಿಗೆ ಡಾ.ಅಂಬೇಡ್ಕರ್ ಹೆಸರು ಬರೆಸಲಾಗಿದೆ. ಮೇಲ್ಸೇತುವೆಗೆ ಸ್ವಾತಂತ್ರ್ಯ ಸೇನಾನಿ ಅವರ ಹೆಸರು ಇಡಲೇಬೇಕು ಎಂದಿದ್ದರೆ.. ಮೇಲ್ಸೇತುವೆ ಆರಂಭ ಹಾಗೂ ಕೊನೆಗೊಳ್ಳುವ ಸ್ಥಳದಲ್ಲಿ ಸ್ವಾಗತ ಕಮಾನು ನಿ ಅವರ ಸ್ವಾತಂತ್ರ್ಯ ಸೇನಾನಿ ಹೆಸರು ಇಡಿ ನಮ್ಮ ಅಂಭ್ಯಂತರವೇನು ಇಲ್ಲ ಎಂಬ ಸಲಹೆಗೆ ನಾಮಫಲಕ ಅಳವಡಿಕೆ ಕೆಲಸ ಸ್ಥಗಿತಗೊಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next