Advertisement

ಪ್ರಾಣಿ ಬಲಿ ನಡೆದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ

07:12 PM Mar 01, 2022 | Team Udayavani |

ಕುಷ್ಟಗಿ: ದೊಣ್ಣೆಗುಡ್ಡ ಶ್ರೀ ದುರ್ಗಾ ದೇವಿ ಜಾತ್ರೆಯಲ್ಲಿ ಪ್ರಾಣಿ ಬಲಿ ಸಹಿಸಲಾಗದು, ಪ್ರಾಣಿ ಬಲಿ ನಿಷೇಧ ಕಾನೂನು ಟ್ರಸ್ಟ್ ನವರು ಹೊಣೆಗಾರರು ಎಂದು ಉಪ ವಿಭಾಗಾಧಿಕಾರಿ ಬಸವಣ್ಣೆಪ್ಪ ಕಲ್ಲಶೆಟ್ಟರ್ ಅವರು, ದೇವಸ್ಥಾನ ಟ್ರಸ್ಟ್ ಕಮೀಟಿ ಸದಸ್ಯರಿಗೆ ತಾಕೀತು ಮಾಡಿದರು.

Advertisement

ಮಂಗಳವಾರ ಇಲ್ಲಿನ ತಹಶೀಲ್ದಾರ ಕಛೇರಿಯಲ್ಲಿ ದೊಣ್ಣೆಗುಡ್ಡ ಜಾತ್ರಾ ಮಹೋತ್ಸವದಲ್ಲಿ ಪ್ರಾಣಿ ಬಲಿ ತಡೆ ಹಿನ್ನೆಲೆಯಲ್ಲಿ ನಡೆದ ತುರ್ತು ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಈ ಹಿಂದೆ ನಡೆದ ಜಾತ್ರೆಗಳಲ್ಲಿ ಪ್ರಾಣಿ ಬಲಿ ನಿಷೇಧದ ಹೊರತಾಗಿಯೂ ಪ್ರಾಣಿ ಬಲಿ ನಡೆದಿವೆ. ಆಗಿದ್ದು ಆಗಿ ಹೋಗಿದೆ ಇನ್ಮುಂದೆ ಈ ಜಾತ್ರೆಯಲ್ಲಿ ಒಟ್ಟಾರೆಯಾಗಿ ಪ್ರಾಣಿ ಬಲಿ ನಡೆಸಂತೆ ಪೊಲೀಸರು ಮುಖ ಮುಲಾಜು ನೋಡದೇ ಕ್ರಮವಹಿಸುವಂತೆ ಸೂಚ್ಯವಾಗಿ ಹೇಳಿದರು.

ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ಮಾತನಾಡಿ, ಡೊಣ್ಣೆಗುಡ್ಡ ಜಾತ್ರೆಯಲ್ಲಿ ಪ್ರಾಣಿ ಬಲಿ ತಡೆಗೆ ಮುನ್ನೆಚ್ಚರಿಕೆ ಹಾಗೂ ಜಾಗೃತಿಗೆ ಪೊಲೀಸ್ ಪಡೆಯ ಪಥ ಸಂಚಲನ ನಡೆಯಲಿದೆ. ಯಾವೂದೇ ಅಹಿತಕರ ಘಟನೆ ನಡೆಯದಂತೆ ನಿಗಾವಹಿಸಲಾಗಿದೆ ಎಂದರು.

ಈ ಜಾತ್ರೆಯಲಿ ಪ್ರಾಣಿ ಬಲಿ ತಡೆಗೆ 6 ಚಕ್ ಪೋಸ್ಟ್ ಆರಂಭಿಸಲಾಗಿದ್ದು ಈ ಚಕ್ ಪೋಸ್ಟನಲ್ಲಿ ಪೊಲೀಸ, ಕಂದಾಯ, ಅರಣ್ಯ ಹಾಗೂ ಪಶು ಇಲಾಖೆ ಸಿಬ್ಬಂದಿ ನೇಮಿಸಲಾಗಿದೆ 144 ಕಲಂ ನಿಷೇದಾಜ್ಞೆ ಜಾರಿಯಲ್ಲಿದ್ದು, ದೇವಸ್ಥಾನದಿಂದ 2 ಕಿ.ಮೀ. ವ್ಯಾಪ್ತಿಯಲ್ಲಿ ಗುಂಪು ಗುಂಪಾಗಿ ಜನ ಸಂಚರಿಸದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಸಭೆಗೆ ತಿಳಿಸಿದರು.

ಇದನ್ನೂ ಓದಿ : ಮಹಾ ಶಿವರಾತ್ರಿ : ಭೀಮನ ಪಾದದಲ್ಲಿ ಪೂಜೆ ಸಲ್ಲಿಸಿದ ಸ್ವರ್ಣವಲ್ಲೀ ಶ್ರೀ

Advertisement

ದ್ರೋಣ್ ಬಳಕೆಗೆ ಸಲಹೆ: ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ಪ್ರತಿ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧದ ಹೊರತಾಗಿಯೂ ಪ್ರಾಣಿ ಬೆಲೆ ನಡೆದಿವೆ.

ಕುಂಬಳಾವತಿಯಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದ್ದು, ದೊಣ್ಣೆಗುಡ್ಡ ಜಾತ್ರೆಯಲ್ಲಿ ಯಶಶ್ವಿಗೊಳಿಸಿ ಹಲವು ವರ್ಷಗಳ ಮೌಢ್ಯಾಚರಣೆಗೆ ಬ್ರೇಕ್ ಹಾಕಬೇಕಿದೆ. ಚಕ್ ಪೋಸ್ಟ್ ಇದ್ದಾಗ್ಯೂ ವಾಮ ಮಾರ್ಗದಲ್ಲಿ ಹರಕೆಯ ಪ್ರಾಣಿಗಳನ್ನು ತರುತ್ತಾರೆ. ಇದನ್ನು ತಡೆಯಲು ಇಂದಿನ ಅತ್ಯಾಧುನಿಕ ತಂತ್ರಜ್ಞಾನದ ದ್ರೋಣ್ ಕ್ಯಾಮರಾ ಬಳಸಬೇಕೆಂದು ಸಭೆಗೆ ಸಲಹೆ ನೀಡಿದರು. ಇದಕ್ಕೆ ಸಹಾಯಕ ಆಯುಕ್ತ ಬಸವಣ್ಣೆಪ್ಪ ಕಲ್ಲಶೆಟ್ಟರ್ ಸಹಮತ ವ್ಯಕ್ತಪಡಿಸಿದರು.

ಸಭೆಯಲ್ಲಿ ಅರಣ್ಯ ಇಲಾಖೆಯ ಜಿಲ್ಲಾಧಿಕಾರಿ ವಿಜಯಕುಮಾರ, ಕ್ರೈಂ ವಿಭಾಗದ ಪಿಎಸೈ ಮಾನಪ್ಪ ವಾಲ್ಮೀಕಿ, ಪಶು ಸಂಗೋಪನಾ ಇಲಾಖೆಯ ಸಹಾಯಕ ನಿದರ್ೇಶಕ ಡಾ. ಅಖಿಲ್, ದೊಣ್ಣೆಗುಡ್ಡ ದುಗರ್ಾದೇವಿ ಟ್ರಸ್ಟ್ ನ ವೀರಣ್ಣ ದೇಸಾಯಿ, ಉಪಾಧ್ಯಕ್ಷ ಅಡಿವೆಪ್ಪ ಬಾವಿಮನಿ ಮತ್ತೀತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next