ಕುಷ್ಟಗಿ:ಕುಷ್ಟಗಿ ಪುರಸಭೆ ನೂತನ ಮುಖ್ಯಾಧಿಕಾರಿಯಾಗಿ ಧರಣೇಂದ್ರ ಕುಮಾರ ಅವರು ಶುಕ್ರವಾರ ಅಧಿಕಾರವಹಿಸಿಕೊಂಡಿದ್ದಾರೆ.
ಕುಷ್ಟಗಿ ಪುರಸಭೆ ಮುಖ್ಯಾಧಿಕಾರಿಯಾಗಿ ಸೇವೆಯಲ್ಲಿದ್ದ ಮುಖ್ಯಾಧಿಕಾರಿ ಬಿ.ಟಿ. ಬಂಡಿವಡ್ಡರ್ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಪದೇ ಪದೇ ಕಛೇರಿಗೆ ಗೈರು, ಸಾಮಾನ್ಯ ಸಭೆಯಲ್ಲಿ ಭಾಗವಹಿಸದೇ ಇರುವುದು, ಕಡತ ವಿಲೇವಾರಿ ಅನಗತ್ಯ ವಿಳಂಬದ ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಸಾಮಾನ್ಯ ಸಭೆಯಲ್ಲಿ ಮುಖ್ಯಾಧಿಕಾರಿಯನ್ನು ಬದಲಿಸುವಂತೆ ಫ.27 ರಂದು ನಿರ್ಣಯ ಕೈಗೊಂಡಿದ್ದರು.
ಸದರಿ ನಿರ್ಣಯದನ್ವಯ ಬಿ.ಟಿ. ಬಂಡಿವಡ್ಡರ್ ಅವರನ್ನು ಹುನಗುಂದ ಗೆ ವರ್ಗಾಯಿಸಲಾಗಿದೆ. ಇವರ ಸ್ಥಾನಕ್ಕೆ ಹೂವಿನ ಹಡಗಲಿ ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರ ಕುಮಾರ ಅವರನ್ನು ಕುಷ್ಟಗಿ ಪುರಸಭೆ ಮುಖ್ಯಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಧರಣೇಂದ್ರ ಕುಮಾರ ಅವರು, ಕುಷ್ಟಗಿ ಪುರಸಭೆಯಲ್ಲಿ ಈ ಹಿಂದೆ ಸಮುಧಾಯ ಸಂಪರ್ಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.