Advertisement

ಮತದಾರರ ಪಟ್ಟಿಯ ಪರಿಷ್ಕರಣೆಗೆ ಸಹಕರಿಸಿ: ಶಿವಪ್ಪ ಸುಬೇದಾರ್

01:20 PM Nov 09, 2022 | Team Udayavani |

ಕುಷ್ಟಗಿ: ಜಿಲ್ಲಾ ಸ್ವೀಪ್ ಸಮಿತಿ, ಹಾಗೂ ತಾಲೂಕು ಸ್ವೀಪ್ ಸಮಿತಿ ಕುಷ್ಟಗಿ ಇವರ ಸಹಯೋಗದಲ್ಲಿ ಕುಷ್ಟಗಿ ಪಟ್ಟಣದ ಕಾರ್ಗಿಲ್ ಮಲ್ಲಯ್ಯ ಸರ್ಕಲ್ ನಲ್ಲಿ ಆಯೋಜಿಸಲಾದ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ತಹಶಿಲ್ದಾರ ಗುರುರಾಜ ಛಲವಾದಿ ಹಾಗೂ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ಪ ಸುಬೇದಾರ್ ಚಾಲನೆ ನೀಡಿದರು.

Advertisement

ನಂತರ ತಹಶೀಲ್ದಾರ ಗುರುರಾಜ ಛಲವಾದಿ ಮಾತನಾಡಿ, ಮತದಾರರ ಪರಿಷ್ಕರಣೆ-2023 ಎಲ್ಲಾ ಗ್ರಾಮದಲ್ಲಿ ಜರುಗುತ್ತಿದ್ದು 18 ವರ್ಷ ಮೇಲ್ಪಟ್ಟ ಯುವಕರು ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆ, ಈಗಾಗಲೇ ಮರಣ ಹೊಂದಿದ್ದಲ್ಲಿ ರದ್ದತಿ, ಮತದಾರರ ಹೆಸರು ತಿದ್ದುಪಡಿ, ವರ್ಗಾವಣೆ ಇತ್ಯಾದಿಗಳು ಜರುಗುತ್ತಿದ್ದು ಈ ದಿಸೆಯಲ್ಲಿ ಸಾರ್ವಜನಿಕರು ಸಹಕರಿಸಬೇಕೆಂದು ಕರೆ ನೀಡಿದರು.

ಸ್ವೀಪ್‌ ಕಾರ್ಯಕ್ರಮದ ಅಧ್ಯಕ್ಷರು ಹಾಗು ತಾಲೂಕ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ಪ ಸುಬೇದಾರ್‌ ಮಾತನಾಡಿ ಮತದಾರರ ವಿಶೇಷ ಪಟ್ಟಿಯ ಪರಿಷ್ಕರಣೆಯಲ್ಲಿ ತಮ್ಮ ಹೆಸರು ಬಿಟ್ಟು ಹೋಗಿದ್ದರೆ ಇತ್ಯಾದಿಗಳನ್ನು ಸರಿಪಡಿಸಲು ಕಾಲಾವಕಾಶ ನೀಡಲಾಗಿದ್ದು ನಿಮ್ಮ ಹತ್ತಿರ ಬೂತ್‌ ಮಟ್ಟದ ಅಧಿಕಾರಿಗೆ ಸಂಪರ್ಕಿಸಿ ಅಗತ್ಯ ದಾಖಲಾತಿ ನೀಡಿ ಸರಿಪಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಕಾಲೇಜು ವಿದ್ಯಾರ್ಥಿಗಳ ಜಾಥಾ ಕಾರ್ಯಕ್ರಮವು ಮಲ್ಲಯ್ಯ ಸರ್ಕಲ್ ನಿಂದ ಪ್ರಾರಂಭವಾಗಿ ಬಸ್ ನಿಲ್ದಾಣ, ಸಂತೆ ಮಾರುಕಟ್ಟೆ ಮಾರ್ಗವಾಗಿ ಪುರಸಭೆಯವರೆಗೆ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದಲ್ಲಿ ಪಂಚಾಯತ್‌ ರಾಜ್ ಸಹಾಯಕ‌ ನಿರ್ದೇಶಕ ಹನಮಂತಗೌಡ ಪೋಲಿಸ್‌ ಪಾಟೀಲ್, ತಾಲೂಕ ಪಂಚಾಯತ ಸಹಾಯಕ‌ ಲೆಕ್ಕಾಧಿಕಾರಿ‌ ರುದ್ರಪ್ಪ ಅಕ್ಕಿ, ತಾಲೂಕ ಯೋಜನಾಧಿಕಾರಿ ಸುವರ್ಣ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ. ಎಸ್.ವಿ ಡಾಣಿ, ವಾಣಿಜ್ಯಶಾಸ್ತ್ರ ಮುಖ್ಯಸ್ಥ ಎ.ಬಿ ಕೆಂಚರಡ್ಡಿ, ಉಪನ್ಯಾಸಕರಾದ ರಾಜಶೇಖರ ಕಲಕಬಂಡಿ, ಕಂದಾಯ ಇಲಾಖೆ ಅಧಿಕಾರಿಗಳು ಹಾಗು ಸಿಬ್ಬಂದಿಗಳು, ತಾಲೂಕು ಪಂಚಾಯತಿ ವಿಷಯ ನಿರ್ವಾಹಕ ಸಂಗಪ್ಪ‌ ನಂದಾಪುರ ಐಇಸಿ ಸಂಯೋಜಕ ದೇವರಾಜ ಪತ್ತಾರ, ಸಂಜೀವಿನಿ ಯೋಜನೆಯ ತಾಲೂಕ ಕಾರ್ಯಕ್ರಮ ವ್ಯವಸ್ಥಾಪಕ ಸಂಗಣ್ಣ ಸಂಗಾಪುರ, ಸುಪರ್‌ ವೈಸರ್‌ಗಳಾದ ಮಾದೇಗೌಡ ಪೋಲಿಸ್‌ ಪಾಟೀಲ್‌, ರಾಜು ಭಜೆಂತ್ರಿ, ಸಿಬ್ಬಂದಿಗಳು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜ್, ಪ್ರಾಂಶುಪಾಲರು, ಉಪನ್ಯಾಸಕರು, ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next