ಕುಷ್ಟಗಿ: ಪತ್ನಿ ಮೃತಳಾಗಿ ಕೆಲವೇ ಗಂಟೆಗಳಲ್ಲಿ ಪತಿ ಇಹಲೋಕ ತ್ಯಜಿಸಿದ ಘಟನೆ ಕುಷ್ಟಗಿ ತಾಲೂಕಿನ ಮದಲಗಟ್ಟಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹೊನ್ನಮ್ಮ ಶಿವಪ್ಪ ತಳವಾರ( 56) ಅವರು ಕಳೆದ ಬುಧವಾರ ಮದ್ಯಾಹ್ನ ನಿಧನರಾಗಿದ್ದರು. ಬಾಳ ಸಂಗಾತಿಯ ಅಗಲಿಕೆಯಲ್ಲಿ ರೋಧನೆಯಲ್ಲಿ ಹೊನ್ನಮ್ಮಳ ಶವದ ಮುಂದೆ ಕುಳಿತಿದ್ದ ಶಿವಪ್ಪ ತಳವಾರ ಕಳೆದ ರಾತ್ರಿ 10 ಗಂಟೆಗೆ ಏಕಾಏಕಿ ಅಸ್ವಸ್ಥಗೊಂಡಿದ್ದರು. ಕೊನೆಯುಸಿರೆಳೆಯುವ ಮೂಲಕ ಪತಿ ಶಿವಪ್ಪ ಪತ್ನಿ ಹೊನ್ನಮ್ಮ ಅನ್ಯೋನ್ಯ ದಂಪತಿ ಸಾವಿನಲ್ಲಿ ಒಂದಾಗಿದ್ದಾರೆ.
ಈ ದಂಪತಿಗಳು ನಾಲ್ವರು ಪುತ್ರಿಯರು, ಇಬ್ವರು ಪುತ್ರರನ್ನು ಆಗಲಿದ್ದಾರೆ. ಕೆಲವೇ ಗಂಟೆಯಲ್ಲಿ ಇಳಿವಯಸ್ಸಿನ ದಂಪತಿ ವಿಚಿತ್ರ ಸಾವಿಗೆ ಗ್ರಾಮದಲ್ಲಿ ದುಃಖ ಮಡುಗಟ್ಟಿದೆ.
ಇವರೀರ್ವರ ಅಂತಿಮ ಸಂಸ್ಕಾರ ಗುರುವಾರ ಮಧ್ಯಾಹ್ನ ಅವರ ಜಮೀನಿನಲ್ಲಿ ನಡೆಯಲಿದೆ.
Related Articles
ಇದನ್ನೂ ಓದಿ : ರಷ್ಯಾಕ್ಕೆ ಆಘಾತ ನೀಡಿದ ಉಕ್ರೇನ್; ಒಂದು ಸಾವಿರ ಯೋಧರ ಸಾವು