Advertisement

ಅವೈಜ್ಞಾನಿಕ ಕಾಮಗಾರಿ : ರಸ್ತೆ ಮೇಲೆ ನಿಲ್ಲುತ್ತಿದೆ ಕೊಳಚೆ ನೀರು, ಕಾಯಿಲೆ ಹರಡುವ ಭೀತಿ

05:33 PM Jul 18, 2022 | Team Udayavani |

ಕುಷ್ಟಗಿ : ಅವೈಜ್ಞಾನಿಕ ರಸ್ತೆ ನಿರ್ಮಾಣದ ಹಿನ್ನೆಲೆಯಲ್ಲಿ ಸಿಸಿ ರಸ್ತೆಯ ಮೇಲೆ ನೀರು ನಿಲ್ಲುತ್ತಿರುವುದು ನಿತ್ಯ ತೊಂದರೆ ಅನುಭವಿಸುವಂತಾಗಿದೆ.

Advertisement

ದಿನ ಬೆಳಗಾದರೆ ಈ ಗಲೀಜು ದಾಟಿಕೊಂಡು ಮನೆ ಸೇರಬೇಕಿದೆ.

ಇದು ಕುಷ್ಟಗಿ ಪಟ್ಟಣದ 2ನೇ ವಾರ್ಡಿನ ಬುತ್ತಿಬಸವೇಶ್ವರ ನಗರದ ರಥ ಬೀದಿಗೆ ಹೊಂದಿಕೊಂಡಿರುವ ಎನ್.ಜೆ.ಕಿಡ್ಸ್ ಶಾಲೆಯ ದುಸ್ಥಿತಿ ಇದು. ಈ ರಸ್ತೆಯನ್ನು ಸಿಸಿ ರಸ್ತೆಯಾಗಿ ಅಭಿವೃದ್ಧಿಪಡಿಸಿದ ಕೆಲಸ ಮೆಚ್ಚುವ ಬದಲಿಗೆ ಹಿಡಿಶಾಪ ಹಾಕುವಂತಾಗಿದೆ.

ಗುತ್ತಿಗೆದಾರ ರಹೇಮಾನ ದೊಡ್ಡಮನಿ ಅವರು ನಿರ್ವಹಿಸಿದ ಈ ಅವೈಜ್ಞಾನಿಕ ಸಿಸಿ ರಸ್ತೆ ಕಾಮಗಾರಿ ಇನ್ನೂ ಸರಿಪಡಿಸಿಲ್ಲ. ಈ ಸಿಸಿ ರಸ್ತೆಯಲ್ಲಿ ಮಧ್ಯಭಾಗದಲ್ಲಿ ತಗ್ಗು ಆಗಿದ್ದು ಮಳೆಗಾಲದಲ್ಲಿ ಬಿದ್ದ ಮಳೆ ನೀರು ಮುಂದೆ ಹರಿದು ಹೋಗುವ, ನೀರು ಇಂಗುವ ವ್ಯವಸ್ಥೆ ಇಲ್ಲ. ಹೀಗಾಗಿ ಸಿಸಿ ರಸ್ತೆಯ ಮೇಲೆ ನೀರು ನಿಲ್ಲುತ್ತಿದೆ ನಿತ್ಯ ಈ ಗಲೀಜು ನೀರು ದಾಟಿಕೊಂಡು ಹೋಗಬೇಕಿದ್ದು ವಾಹನ ಸಂಚರಿಸಿದರೆ ಸಿಡಿಸಿಕೊಳ್ಳಬೇಕಿದೆ.

ಇದನ್ನೂ ಓದಿ : ರಾಷ್ಟ್ರಪತಿ ಚುನಾವಣೆ 2022; ವ್ಹೀಲ್ ಚೇರ್ ನಲ್ಲಿ ಆಗಮಿಸಿ ಮತಚಲಾಯಿಸಿದ ಮಾಜಿ ಪ್ರಧಾನಿ ಸಿಂಗ್

Advertisement

ನಿತ್ಯ ನೀರು ನಿಲ್ಲುತ್ತಿರುವ ಹಿನ್ನೆಲೆಯಲ್ಲಿ ಸೊಳ್ಳೆ ಕಾಟ ಅತಿಯಾಗಿದ್ದು, ಡೆಂಗ್ಯೂ, ಮಲೇರಿಯಾ, ಚಿಕೂನ್ ಗುನ್ಯಾ ಭೀತಿ ಸ್ಥಳೀಯರನ್ನು ಕಾಡುತ್ತಿದೆ. ಸ್ಥಳೀಯ ‌ನಿವಾಸಿ ಸೋಮಶೇಖರ್ ಸೂಡಿ ಪ್ರತಿಕ್ರಿಯಿಸಿ ಈ ಕಾಮಗಾರಿಯನ್ನು ತುಂಡು ಗುತ್ತಿಗೆದಾರ ಪುರಸಭೆ ಸದಸ್ಯ‌ ಸಯ್ಯದ್ ಖಾಜಾ ಮೈನುದ್ದೀನ್ ಮುಲ್ಲ ನಿರ್ವಹಿಸಿದ್ದು, ಸರಿಪಡಿಸಲು ವಿನಂತಿಸಿದರೆ ಕೆಲಸ ಇಷ್ಟಕ್ಕೆ ಮುಗಿಯಿತು ಎಂದು ತಿಳಿಸಿದ್ದರಿಂದ ಅವೈಜ್ಞಾನಿಕ ಸಿಸಿ ರಸ್ತೆ ಅಭಿವೃದ್ಧಿ ಹೊಂದಿದರೂ ತೊಂದರೆ ಅನುಭವಿಸುವಂತಾಗಿದೆ. ಸಿಸಿ ರಸ್ತೆಯಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಿ ಈ ಪ್ರದೇಶದಲ್ಲಿ ಕೊಳಗೇರಿ ನಿವಾಸಿಗಳಂತಾಗಿದ್ದೇವೆ ಎನ್ನುವುದು ಅವರ ಅಳಲು.

ಪುರಸಭೆ ಸದಸ್ಯ ರಾಜೇಶ ಪತ್ತಾರ ಪ್ರತಿಕ್ರಿಯಿಸಿ ಅವೈಜ್ಞಾನಿಕ ಸಿಸಿ ಕಾಮಗಾರಿಯಾಗಿರುವ ವಿಷಯ ಗಮನದಲ್ಲಿದ್ದು ಪುರಸಭೆ ಅಧ್ಯಕ್ಷರ ಗಮನಕ್ಕೆ ತಂದಿರುವೆ. ಕೆಲವೇ ದಿನಗಳಲ್ಲಿ ಸಿಮೆಂಟ್ ಕಾಂಕ್ರೀಟ್ ರೀ ಕೋಟಿಂಗ್ ಮಾಡಿಸಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳುವ‌ ಭರವಸೆ ವ್ಯಕ್ತಪಡಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next