ಕುಷ್ಟಗಿ : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಯುವಕನೋರ್ವ ನಿಡಶೇಸಿ ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಿಡಶೇಸಿ ಗ್ರಾಮದ ಯುವಕ ಶರಣಪ್ಪ ಯಮನಪ್ಪ ಶಿರಗುಂಪಿ (30) ಎಂದು ಗುರುತಿಸಲಾಗಿದೆ. ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಶರಣಪ್ಪ ಮನೆಯಲ್ಲಿ ಸಾಯುವುದಾಗಿ ಹೇಳುತ್ತಲೇ ಇದ್ದ. ಆದರೆ ಮನೆಯವರು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.
ಕಳೆದ ಶುಕ್ರವಾರ ಮನೆಯಲ್ಲಿ ಹೊರಗೆ ಹೋಗುವುದಾಗಿ ಹೇಳಿ ಹೋದಾತ ಮನೆಗೆ ಬಂದಿರಲಿಲ್ಲ. ಮನೆಯಲ್ಲಿ ಹುಡುಕಾಟ ನಡೆಸಿದರೂ ಶರಣಪ್ಪ ಪತ್ತೆಯಾಗಿರಲಿಲ್ಲ. ಕಳೆದ ಶನಿವಾರ ನಿಡಶೇಸಿ ಕೆರೆಯಲ್ಲಿ ಕಳೆ ಬರಹ ತೇಲುತ್ತಿರುವುದು ತೋಟದ ಮಾಲೀಕ ಪ್ರಭು ತಾಳದ್ ಅವರ ಗಮನಕ್ಕೆ ಬಂದಿದ್ದು, ಪೊಲೀಸ್ ರಿಗೆ ಮಾಹಿತಿ ನೀಡಿ, ಸ್ಥಳೀಯರ ಸಹಾಯದಿಂದ ತೇಲುವ ಶವ ಹೊರ ತೆಗೆದಿದ್ದಾರೆ. ಮೃತ ಶರಣಪ್ಪ ಪತ್ನಿ,ಇಬ್ಬರು ಮಕ್ಕಳು ಇದ್ದಾರೆ. ಪ್ರಕರಣ ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ವಿವಿಧ ತಳಿಯ 1634 ಹಣ್ಣಿನ ಗಿಡಗಳನ್ನು ನೆಟ್ಟು ಉತ್ತಮ ಫಸಲು ಕಂಡ ತೆಕ್ಕಟ್ಟೆಯ ಉದ್ಯಮಿ