ಕುಷ್ಟಗಿ: ಆಸ್ತಿಯನ್ನು ಮಗಳ ಹೆಸರಿಗೆ ವರ್ಗಾಯಿಸಲು ಮುಂದಾದ ತಂದೆಯ ನಿರ್ಧಾರಕ್ಕೆ ಅಡ್ಡಿಯಾದ ಮಗನಿಗೆ ತಂದೆ ಮರಣಾಂತಿಕವಾಗಿ ಕುಡಗೋಲಿನಿಂದ ಕೊಚ್ಚಿದ ಘಟನೆ ತಾಲೂಕಿನ ಪಟ್ಟಲಚಿಂತಿ ಗ್ರಾಮದಲ್ಲಿ ನಡೆದಿದೆ.
ಶಂಕ್ರಯ್ಯ ಮಲ್ಲಯ್ಯ ಗೌರಿಮಠ(32) ತಂದೆಯ ಸಿಟ್ಟಿಗೆ ಹಲ್ಲೆಗೊಳಗಾಗಿ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾನೆ.
ತಂದೆ ಮಲ್ಲಯ್ಯ ಗೌರಿಮಠ ಅವರು ಜಮೀನು ಮಗಳ ಹೆಸರಿಗೆ ವರ್ಗಾಯಿಸಲು ಮುಂದಾಗಿದ್ದರು. ಆದರೆ ಮಗನಿಗೆ ಸುತಾರಾಮ್ ಇಷ್ಟವಿರಲಿಲ್ಲ. ಈ ಬೆಳವಣಿಗೆಗೆ ರೋಸಿ ಹೋದ ಮಗ ಶಂಕ್ರಯ್ಯ ತಕರಾರು ವ್ಯಕ್ತ ಪಡಿಸಿದ್ದ. ಈ ಆಸ್ತಿ ಹಂಚಿಕೆ ವಿಚಾರದ ವ್ಯಾಜ್ಯ ಆಗಾಗ್ಗೆ ನಡೆಯುತ್ತಲೇ ಇತ್ತು. ಆಸ್ತಿಗಾಗಿ ಮಗನ ಪೀಡಿಸುವಿಕೆ ಜಾಸ್ತಿಯಾದಾಗ ಕುಪಿತಗೊಂಡ ತಂದೆ ಮಲಯ್ಯ ಕುಡಗೋಲಿನಿಂದ ಮನಸೋ ಇಚ್ಚೆ ಕೊಚ್ಚಿ ಗಾಯಗೊಳಿಸಿದ್ದಾನೆ.
ಮರಣಾಂತಿಕಾ ಗಾಯಗೊಂಡು ರಕ್ತದ ಮಡುವಿನಲ್ಲಿದ್ದ ಮಗ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಜೀವನ್ಮರಣ ಸ್ಥಿತಿಯಲ್ಲಿದ್ದಾನೆ. ಇತ್ತ ತಂದೆ ಮಲ್ಲಯ್ಯ ಗೌರಿಮಠ ಹನುಮಸಾಗರ ಠಾಣೆಗೆ ಬಂದು ಶರಣಾಗಿದ್ದಾನೆ. ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related Articles
ಇದನ್ನೂ ಓದಿ : ಪ್ರಧಾನಿ ಸಮ್ಮುಖದಲ್ಲಿ ಇಂದು ಕಾರ್ಯಕ್ರಮನೀಡಲಿದೆ ಬುಡಕಟ್ಟು ಮಕ್ಕಳ ತಂಡ