Advertisement

ಕುಷ್ಟಗಿ ಪುರಸಭೆ 16ನೇ ವಾರ್ಡ್ ಉಪ ಚುನಾವಣೆ : 166 ಮತಗಳಿಂದ ಬಿಜೆಪಿ ಅಭ್ಯರ್ಥಿ ಜಯಭೇರಿ

01:38 PM Sep 06, 2021 | Team Udayavani |

ಕುಷ್ಟಗಿ (ಕೊಪ್ಪಳ): ಕುಷ್ಟಗಿ ಪುರಸಭೆ 16ನೇ ವಾರ್ಡ್ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಕ್ಕಮಹಾದೇವಿ ಬಸವರಾಜ ನಾಯಕವಾಡಿ 166 ಮತಗಳ ಅಂತರದಿಂದ ಭರ್ಜರಿ ಜಯಗಳಿಸಿದ್ದಾರೆ.

Advertisement

ಸೋಮವಾರ ತಹಶೀಲ್ದಾರ ಕಛೇರಿ ಸಭಾಂಗಣದಲ್ಲಿ ನಡೆದ ಮತ ಏಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಅಕ್ಕಮಹಾದೇವಿ ಬಸವರಾಜ ನಾಯಕವಾಡಿ ಅವರಿಗೆ 438 ಮತಗಳು ಇವರ ಪ್ರತಿಸ್ಪರ್ಧಿ ಪಾರ್ವತಿ ನಾಗರಾಜ್ ಬಂಡಿ ಅವರಿಗೆ 272 ಮತಗಳು ಪ್ರಾಪ್ತವಾದವು. 5 ನೋಟಾ ಮತಗಳು ಬಿದ್ದಿವೆ. ಸದರಿ ಉಪ ಚುನಾವಣೆಯಲ್ಲಿ 16ನೇ ವಾರ್ಡ ನೂತನ ಸದಸ್ಯೆಯಾಗಿ ಅಕ್ಕಮಹಾದೇವಿ ಬಸವರಾಜ ನಾಯಕವಾಡಿ 166 ಮತಗಳ ಅಂತರದಿಂದ ಭರ್ಜರಿ ಜಯಗಳಿಸಿದರು. ಚುನಾವಣಾಧಿಕಾರಿಯಾಗಿ ಅಮರೇಶ ಹಾವಿನ್ ಕಾರ್ಯನಿರ್ವಹಿಸಿದರು.

ಕಳೆದ ಸೆ.3ರಂದು ನಡೆದ ಉಪ ಚುನಾವಣೆಯಲ್ಲಿ 16ನೇ ವಾರ್ಡ ಒಟ್ಟು 948 ಮತದಾರರಲ್ಲಿ ಒಟ್ಟು 715 ಜನ ಮತ ಚಲಾಯಿಸಿದ್ದರು.

ಇದನ್ನೂ ಓದಿ :ಸೆ.13 ರವರೆಗೆ ಕರ್ಫ್ಯೂ ವಿಸ್ತರಣೆ, ಕೇರಳದಿಂದ ಬಂದವರಿಗೆ ಕಡ್ಡಾಯ ಕ್ವಾರಂಟೈನ್‍ : ಗೋವಾ ಸಿಎಂ

ಕುಷ್ಟಗಿ ಪುರಸಭೆ ಉಪ ಚುನಾವಣೆಯಲ್ಲಿ ಹಾಲಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ ಪ್ರತಿಷ್ಠೆಯ ಚುನಾವಣೆಯಲ್ಲಿ ಹಾಲಿ ಶಾಸಕರ ಬಣಕ್ಕೆ ಹಿನ್ನೆಡೆಯಾಗಿದೆ. ಉಪ ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ವಾರ್ಡಿನ ಚನ್ನಬಸವೇಶ್ವರ ವೃತ್ತದಲ್ಲಿ ಒಂಟೆಯ ಮೇಲೆ ಬಿಜೆಪಿ ಧ್ವಜ ಹಿಡಿದು ವಿಜಯೋತ್ಸವ ಸಂಭ್ರಮಿಸಿದರು.

Advertisement

ಬಿಜೆಪಿ ನೇತೃತ್ವದ ಪುರಸಭೆ ಅದ್ಯಕ್ಷ ಗಂಗಾಧರಸ್ವಾಮಿ ಹಿರೇಮಠ ಅವರ ಪುರಸಭೆ ಆಡಳಿತಕ್ಕೆ ಈ ಉಪ ಚುನಾವಣೆಯ ಫಲಿತಾಂಶ ಪ್ಲಸ್ ಪಾಯಿಂಟ್ ಆಗಿದೆ.ಸತತ ಎರಡು ಬಾರಿ ಪಕ್ಷೇತರರಿಗೆ ಮಣೆ ಹಾಕಿದ್ದ 16 ನೇ ವಾರ್ಡ ಮತದಾರರು ಈ ಬಾರಿ ಕಾಂಗ್ರೆಸ್ ಗೆ ಕೈ ಕೊಟ್ಟು ಬಿಜೆಪಿ ಕೈ ಹಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next