Advertisement

ಕುಷ್ಟಗಿ: ಎಂಎಸ್ ಐಎಲ್ ಮದ್ಯ ಮಳಿಗೆಯಲ್ಲಿ ಸಿಸಿ ಕ್ಯಾಮರಾ ಸಹಿತ ಕಳ್ಳತನ

09:45 PM May 22, 2022 | Team Udayavani |

ಕುಷ್ಟಗಿ: ತಾಲೂಕಿನ ಹಿರೇಮನ್ನಾಪೂರ ಎಂಎಸ್ ಐಎಲ್ ಮದ್ಯ ಮಾರಾಟ ಮಳಿಗೆಯಲ್ಲಿ ಕ್ಯಾಶ್ ಕೌಂಟರ್ ನಲ್ಲಿದ್ದ ನಗದು ಸಹಿತ, ಸಿಸಿ ಕ್ಯಾಮರಾ ಹೊತ್ತೊಯ್ದ ಪ್ರಕರಣ ನಡೆದಿದೆ.

Advertisement

ಹಿರೇಮನ್ನಾಪೂರ ಗ್ರಾಮದ ಹೊರವಲಯದಲ್ಲಿರುವ ಎಂ.ಎಸ್.ಐ.ಎಲ್. ಮದ್ಯದ ಮಾರಾಟ ಮಳಿಗೆಯ ಶೆಟರ್ ರಾಡ್ ನಿಂದ ಎಬ್ಬಿಸಿ ಒಳಗೆ ನುಗ್ಗಿದ ಚಾಲಾಕಿ ಕಳ್ಳರು, ಕ್ಯಾಶ್ ಕೌಂಟರ್ ನಲ್ಲಿದ್ದ 65,687 ರೂ.ನಗದನ್ನು ಕದ್ದೊಯ್ದಿದ್ದಾರೆ. ಆದರೆ ಮದ್ಯದ ಒಂದೇ ಒಂದು ಬಾಟಲಿ, ಪ್ಯಾಕೆಟ್ ಗಳನ್ನೂ ಮುಟ್ಟಿಲ್ಲ. ಕಳ್ಳತನದ ಸುಳಿವು ಗೊತ್ತಾಗುತ್ತದೆ, ಸಾಕ್ಷಿ ಸಮೇತ ಸಿಕ್ಕಿ ಬೀಳುವ ಆತಂಕದಲ್ಲಿ ಸಿಸಿ ಕ್ಯಾಮರಾಗಳನ್ನೇ ಹೊತ್ತೊಯ್ದಿದ್ದಾರೆ. ಈ ಪ್ರಕರಣ ಭಾನುವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಕೊಪ್ಪಳದ ಶ್ವಾನದಳ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿತು. ಪ್ರಕರಣ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next