Advertisement

ಅಂಬೇಡ್ಕರ್ ಭಾವಚಿತ್ರ ತೆಗೆಸಿದ ಪ್ರಕರಣ : ಕುಷ್ಟಗಿ ಬಂದ್, ಪ್ರಯಾಣಿಕರ ಪರದಾಟ

11:03 AM Feb 02, 2022 | Team Udayavani |

ಕುಷ್ಟಗಿ: ರಾಯಚೂರು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರವನ್ನು ತೆಗೆಸಿದ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ವರ್ತನೆ ಪ್ರಕರಣ ಖಂಡಿಸಿ ಮಂಗಳವಾರ ಕುಷ್ಟಗಿ ಬಂದ್ ಇಂದು ಬೆಳಗ್ಗಿನಿಂದಲೇ ಬಿಗುವಿನ ವಾತಾವರಣ.

Advertisement

ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಕುಷ್ಟಗಿ ಬಂದ್ ಗೆ‌ ಎರಡ್ಮೂರು ದಿನಗಳ ಮೊದಲೇ ಘೋಷಣೆ ಹಿನ್ನೆಲೆಯಲ್ಲಿ ಮಂಗಳವಾರ ಪಟ್ಟಣದ ಅಂಗಡಿ ಮುಂಗಟ್ಟುಗಳು ‌ಮುಚ್ಚಿದ್ದವು ಜನ ಸಂಚಾರ ವಿರಳವಾಗಿದ್ದು, ಬೆಳಗ್ಗೆ 6 ಗಂಟೆಯಿಂದ 7 ರವರೆಗೆ ಆಯಾ ಮಾರ್ಗದ ಬಸ್ ಗಳು ನಿಲ್ದಾಣದಿಂದ ನಿರ್ಗಮಿಸಿದವು. ಹೊರಗಿನಿಂದ ಬರುವ ಬಸ್ಸುಗಳು ಪಟ್ಟಣ ಪ್ರವೇಶಿಸದೇ ಹೊರವಲಯದಲ್ಲಿ ಪ್ರಯಾಣಿಕರನ್ನು ಇಳಿಸಿದ್ದರಿಂದ ಪ್ರಯಾಣಿಕರು ಲಗೇಜ್ ಹೊತ್ತು ಪಟ್ಟಣದೆಡೆಗೆ ಬರಲು ಪರದಾಡಿದರು. ಮತ್ತೊಂದು ಊರಿಗೆ ಹೋಗುವ ಪ್ರಯಾಣಿಕರಿಗೆ ಬಸ್ ಸಿಗದೇ ಚಡಪಡಿಸಿದರು.

ಬಸ್ ಡಿಪೋದಲ್ಲಿ ಅಧಿಕಾರಿಗಳು ಪರಿಸ್ಥಿತಿ ಗಮನಿಸಿ ಬಸ್ ಬಿಡುವುದಾಗಿ ತಿಳಿಸಿದ್ದರಿಂದ ಬಹುತೇಕ ಬಸ್ಸುಗಳು ನಿಲ್ದಾಣ ಬಿಟ್ಟು ಹೊರಗೆ ಬರಲಿಲ್ಲ. ಹೀಗಾಗಿ ಬಸ್ ನಿಲ್ದಾಣ ಭಣಗುಡುತ್ತಿತ್ತು. ಇನ್ನೂ ಗ್ರಾಮೀಣ ಪ್ರದೇಶಗಳಿಂದ ಪಟ್ಟಣಕ್ಕೆ ಬರುವ ವಿದ್ಯಾರ್ಥಿಗಳಿಗೆ‌ ಸಂಚಾರ ವ್ಯತ್ಯಯದಿಂದಾಗಿ ಅಸ್ತವ್ಯಸ್ತಕ್ಕೆ ಕಾರಣವಾಯಿತು.

ಇದನ್ನೂ ಓದಿ : ನೀಟ್ ಪರೀಕ್ಷೆ: ಪ್ರಥಮ ರ್ಯಾಂಕ್ ಗಳಿಸಿದ ರನ್ನಬೆಳಗಲಿಯ ಚಿದಾನಂದ ಕಲ್ಲಪ್ಪ

Advertisement
Advertisement

Udayavani is now on Telegram. Click here to join our channel and stay updated with the latest news.

Next