Advertisement

ಕುಷ್ಟಗಿಯ ರಾಧಿಕಾ ನೇಪಾಳದಲ್ಲಿ ಅಂತಾರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಗೆ

09:14 PM Jul 20, 2022 | Team Udayavani |

ಕುಷ್ಟಗಿ:ಕುಷ್ಟಗಿ ತಾಲೂಕಿನ ಕುವರಿ ರಾಧಿಕಾ ಹನಮಂತ ಪಡಸಾಲಿಮನಿ ಇದೇ ತಿಂಗಳ 26 ರಿಂದ 28 ರವರೆಗೆ ನೇಪಾಳದಲ್ಲಿ ಅಂತಾರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾದಿಗ ಸಮಾಜದಿಂದ ಯಶಸ್ವಿಗೆ ಶುಭ‌ ಕೋರಿ ಧನ ಸಹಾಯ ನೀಡಲಾಯಿತು.

Advertisement

ಕುಷ್ಟಗಿ ತಾಲೂಕಿನ ರಂಗಪೂರದ ಪ್ರತಿಭೆ ಅಂತರಾಷ್ಟ್ರೀಯ ಪಂದ್ಯದಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ನೇಪಾಳ ದೇಶದ ರಂಗಶಾಲಾ ಅಂತರಾಷ್ಟ್ರೀಯ ಸ್ಟೇಡಿಯಂ ಪೋಕ್ರಾ ದಲ್ಲಿ ಅಂತರಾಷ್ಟ್ರೀಯ ಮಟ್ಟದ ಕಬ್ಬಡಿ ಪಂದ್ಯಾವಳಿಗೆ ಪಂಚಾಯತ ಯುವ ಕ್ರೀಡಾ ಹಾಗೂ ಖೇಲ್ ಅಭಿಯಾನ (PYKKA) ಕರ್ನಾಟಕ ತಂಡದಿಂದ ಆಯ್ಕೆಯಾಗಿದ್ದಾರೆ.

ಮೂಲತಃ ಕುಷ್ಟಗಿ ತಾಲೂಕಿನ ರಂಗಾಪುರದ ಪ್ರತಿಭೆ ಗದಗ ನಗರದ ಮಹಿಳಾ ಪ್ರಥಮ‌ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ರಾಧಿಕಾ ಅವರು ಗಜೇಂದ್ರಗಡದ ಕಬಡ್ಡಿ ತರಭೇತುದಾರ ರವಿ ಹಲಗಿ ಅವರಲ್ಲಿ ತರಭೇತಿ ಪಡೆದಿದ್ದಾರೆ. ಭವಿಷ್ಯದ ಕ್ರೀಡಾಪಟು ರಾಧಿಕಾ ಪಡಸಾಲಿಮನಿಗೆ ಆರ್ಥಿಕ ಸಂಕಷ್ಟ ಅರಿತು ತಾಲೂಕಿನ ಮಾದಿಗ ಸಮುದಾಯ ಅಭಿಮಾನದಿಂದ ಮುಂದೆ ಬಂದಿದ್ದು ಮಾದಿಗ ಸಮಾಜದಿಂದ 40 ಸಾವಿರ ರೂ.ಧನ ಸಹಾಯ ನೀಡಿದರು.

ಮಾದಿಗ ಸಮಾಜದ ಅಧ್ಯಕ್ಷ ನಾಗರಾಜ ಮೇಲಿನಮನಿ, ಪುರಸಭೆ ಸದಸ್ಯ ವಸಂತ ಮೇಲಿನಮನಿ, ಶಿವಪುತ್ರಪ್ಪ ಗುಮಗೇರಿ, ನಾಗರಾಜ ನಂದಾಪೂರ, ಸಿ.ಎಂ. ಪರಕಿ, ಹುಸೇನಪ್ಪ‌ ಮುದೇನೂರ, ಚಂದಾಲಿಂಗಪ್ಪ ಕಲಾಲಬಂಡಿ, ನೀಲಪ್ಪ ಕಬ್ಬರಗಿ, ಹನುಮಂತ ಕನಕಗಿರಿ, ಮರಿಸ್ವಾಮಿ‌ ಕನಕಗಿರಿ, ಮಹಾಂತೇಶ ಜಾಲಿಗಿಡ ಮತ್ತಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next