ಕುಷ್ಟಗಿ: ಕುಷ್ಟಗಿ- ಇಲಕಲ್ ರಾಷ್ಟ್ರೀಯ ಚತುಷ್ಪಥ ಹೆದ್ದಾರಿ ವಣಗೇರಾ ಟೋಲ್ ಬಳಿಯ ಗೂಡಂಗಡಿಯೊಂದರಲ್ಲಿ 30 ಸಾವಿರ ರೂ. ಎಗರಿಸಿದ್ದ ಕಳ್ಳನನ್ನು ಸಿಸಿ ಟಿವಿ ನೆರವಿನಿಂದ ಕುಷ್ಟಗಿ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಜಿ.ಜಿ.ಹಳ್ಳಿಯ ಸಯ್ಯದ್ ಬಾಬು ಭಾಷು ಸಾಬ್ ಗಾರ್ಲ ಕಳ್ಳತನ ಮಾಡಿದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಹೆದ್ದಾರಿ ಟೋಲ್ ಬಳಿ ಅಮರೇಶ ಗೋತಗಿ ಅವರ ಗೂಡಂಗಡಿಯಲ್ಲಿ ಕಳೆದ ಜ.4 ರಂದು ಈ ಪ್ರಕರಣವಾಗಿದ್ದು, ಆ ಅಂಗಡಿಯಲ್ಲಿರುವ ಸಿಸಿ ಟಿವಿ ಸಹಾಯದಿಂದ ಕಳ್ಳನನ್ನು ಪತ್ತೆ ಹಚ್ಚುವುದು ಸುಲಭವಾಗಿದೆ.
ಸಯ್ಯದ್ ಬಾಬು ಭಾಷು ಸಾಬ್ ಗಾರ್ಲ ಕ್ಯಾಂಟರ್ ಲಾರಿ ಚಾಲಕನಾಗಿದ್ದು, ಎಳನೀರು ಲೋಡ್ ನೊಂದಿಗೆ ಕುಷ್ಟಗಿ ವಣಗೇರಾ ಟೋಲ್ ಮೂಲಕ ಹೋಗುವಾಗ ಲಾರಿ ನಿಲ್ಲಿಸಿದ್ದ. ಅಲ್ಲಿ ಗ್ರಾಹಕ ಸೋಗಿನಲ್ಲಿ ಟೋಲ್ ಹತ್ತಿರದ ಗೂಡಂಗಡಿ ಶೆಟ್ರಸ್ ಸದ್ದು ಮಾಡಿದ್ದ. ಆಗ ಯಾರು ಇಲ್ಲದಿರುವುದು ಗಮನಿಸಿ, ಮೊಬೈಲ್ ಟಾರ್ಚ್ ಸಹಾಯದಿಂದ 30 ಸಾವಿರ ರೂ. ಹಾಗೂ 15 ಸಿಗರೇಟ್ ಪ್ಯಾಕ್ ಕಳವು ಮಾಡುವ ದೃಶ್ಯಾವಳಿಗಳು ಸಿಸಿ ಟಿವಿ ಪುಟೇಜ್ ನಲ್ಲಿ ದಾಖಲಾಗಿತ್ತು.
Related Articles
ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಅವರ ಮಾರ್ಗದರ್ಶನದ ಮೇರೆಗೆ ಪಿಎಸೈ ಮೌನೇಶ ರಾಠೋಡ್ ಚಾಲಕ, ಕಳ್ಳನನ್ನು ಬಂದಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.