ಕುಷ್ಟಗಿ: ಕುಷ್ಟಗಿ ಪಟ್ಟಣದ ಹೊರವಲಯದ ಲಿಯೋ ಕಾಲೋನಿ ವ್ಯಾಪ್ತಿಯ ಪೊಲೀಸ್ ಠಾಣೆಯ ಹಿಂಭಾಗದ ಮಾಜಿ ಸೈನಿಕರೊಬ್ಬರ ಮನೆಯಲ್ಲಿ ಕಳವಾಗಿದೆ.
ಮಾಜಿ ಸೈನಿಕ, ಮಡಿವಾಳ ಸಮಾಜದ ಅಧ್ಯಕ್ಷ ಸುಭಾಶ್ಚಂದ್ರ ಮಡಿವಾಳ ಅವರು ತಮ್ಮ ಕುಟುಂಬದೊಂದಿಗೆ ಹನುಮಸಾಗರದಲ್ಲಿ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಆಚರಣೆಗೆ ಶುಕ್ರವಾರ ಬೆಳಗ್ಗೆ ಹೋಗಿದ್ದರು. ಸಂಜೆ 5 ಕ್ಕೆ ಮನೆಗೆ ವಾಪಸ್ಸಾದಾಗ ಮನೆಯಲ್ಲಿ ಕಳ್ಳತನವಾಗಿರುವುದು ಗೊತ್ತಾಗಿದೆ. ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಮನೆಯನ್ನು ಪರಿಶೀಲಿಸಿ ಶ್ವಾನ ದಳ ಕರೆಸಲು ಕ್ರಮ ಕೈಗೊಂಡಿದ್ದಾರೆ.
ಮಧ್ಯಾಹ್ನದ ಸಮಯದಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿ ಕಳ್ಳರು ಮನೆಯ ಬೀಗ ಮುರಿದು ಕಪಾಟಿನಲ್ಲಿದ್ದ 12 ತೊಲ ಬಂಗಾರ, ಒಂದೂವರೆ ಲಕ್ಷ ರೂ. ದೋಚಿದ್ದಾರೆ. ಬೆಳ್ಳಿಯ ದೇವರ ಮೂರ್ತಿಗಳನ್ನು ದಾರಿಯಲ್ಲಿ ಎಸೆದಿದ್ದಾರೆ.
ಈ ಪ್ರಕರಣ ಲಿಯೋ ಕಾಲೋನಿ, ಕೃಷ್ಣಗಿರಿ ಕಾಲೋನಿ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.