Advertisement

ನಿಲೋಗಲ್‌ ಗ್ರಾಮದಲ್ಲಿ ಆತಂಕದ ಛಾಯೆ

04:48 PM May 08, 2020 | Naveen |

ಕುಷ್ಟಗಿ: ತಾಲೂಕಿನ ನಿಲೋಗಲ್‌ ಗ್ರಾಮದ ಕೆಲವರಿಗೆ ಡಾಣಕಶಿರೂರು ಜೊತೆಗಿನ ಸಂಪರ್ಕ ತಾಲೂಕಿನಾದ್ಯಂತ ಆತಂಕ ಮೂಡಿಸಿದೆ. ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕಿನ ಡಾಣಕಶಿರೂರಿಗೆ ಹೋಗಿ ಬಂದ ಹಿನ್ನೆಲೆಯಲ್ಲಿ ನಿಲೋಗಲ್‌ ಗ್ರಾಮದ ಇಬ್ಬರು ಆಟೋ ಚಾಲಕರು, 8 ಮಕ್ಕಳು ಸೇರಿದಂತೆ ಒಟ್ಟು 18 ಜನ ದ್ವಿತೀಯ ಸಂಪರ್ಕದ ಹಿನ್ನೆಲೆಯಲ್ಲಿ ನಿಡಶೇಸಿ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ಏ. 4ರಂದು ಕ್ವಾರಂಟೈನ್‌ ಮಾಡಲಾಗಿತ್ತು. ದ್ವಿತೀಯ ಸಂಪರ್ಕದಲ್ಲಿ ನಿಲೋಗಲ್‌ 18 ಜನರನ್ನು ಬುಧವಾರ ರಾತ್ರಿ ನಿಡಶೇಸಿ ಕ್ವಾರಂಟೈನ್‌ನಿಂದ ಕೊಪ್ಪಳದ ಖಾಸಗಿ ಹೋಟೆಲ್‌ಗೆ ಸ್ಥಳಾಂತರಿಸುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

Advertisement

ಹಿನ್ನೆಲೆ: ಮೇ 2ರಂದು ನಿಲೋಗಲ್‌ ಗ್ರಾಮದ 18 ಜನರು, ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಡಾಣಕಶಿರೂರಿನ ಗರ್ಭಿಣಿ ಮನೆಯ ಪಕ್ಕದಲ್ಲಿ ಆಯೋಜಿಸಿದ್ದ ಮದುವೆಗೆ ತೆರಳಿದ್ದರು. ಮದುವೆ ರದ್ದಾದ ಹಿನ್ನೆಲೆಯಲ್ಲಿ ಗರ್ಭಿಣಿ ಮನೆಯಲ್ಲಿ ಉಳಿದುಕೊಂಡಿದ್ದರು. ಈ ಜನರು ಮೇ 3ರಂದು ನಿಲೋಗಲ್‌ ಗ್ರಾಮಕ್ಕೆ ವಾಪಸ್ಸಾಗಿದ್ದರು. ಈ ಜನರು ನಿಲೋಗಲ್‌ ಗ್ರಾಮಕ್ಕೆ ಹಿಂತಿರುಗಿದ ದಿನವೇ ಡಾಣಕಶಿರೂರು ಗ್ರಾಮದ ಗರ್ಭಿಣಿಗೆ ಸೋಂಕು ದೃಢವಾಗಿತ್ತು.

ನಿಲೋಗಲ್‌ ಗ್ರಾಮದ 18 ಜನರ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. ಪರೀಕ್ಷೆಯ ವರದಿ ನಿರೀಕ್ಷೆಯಲ್ಲಿದ್ದೇವೆ. ಯಾವುದೇ ಕಾರಣಕ್ಕೂ ಆತಂಕ ಪಡುವುದು ಅಗತ್ಯವಿಲ್ಲ.
ಎಂ. ಸಿದ್ದೇಶ, ತಹಶೀಲ್ದಾರ್‌

ಡಾಣಕಶಿರೂರು ಗ್ರಾಮಕ್ಕೆ ಹೋಗಿ ವಾಪಸ್‌ ಬಂದ ನಿಲೋಗಲ್‌ ಗ್ರಾಮದ 18 ಜನ, ತಮ್ಮ ತಮ್ಮ ಮನೆಯಲ್ಲಿ ಒಂದು ರಾತ್ರಿ ಕಳೆದಿದ್ದಾರೆ. ಈ ವಿಷಯ ಹನುಮಸಾಗರ ಪಿಎಸ್‌ಐ ಅಮರೇಶ ಹುಬ್ಬಳ್ಳಿ ಅವರ ಗಮನಕ್ಕೆ ಬರುತ್ತಿದ್ದಂತೆ, ಈ ಎಲ್ಲರನ್ನು ಬಲವಂತವಾಗಿ ನಿಡಶೇಸಿಯಲ್ಲಿ ಕ್ವಾರಂಟೈನ್‌ ಮಾಡಿಸಿದ್ದಾರೆ.
ಮಹಾಂತೇಶ ಶೆಟ್ಟರ,
ಗ್ರಾಮಸ್ಥ

Advertisement

Udayavani is now on Telegram. Click here to join our channel and stay updated with the latest news.

Next