Advertisement

ಕುಷ್ಟಗಿ: ಕುರುಬ ಸಮುದಾಯಕ್ಕೆ ಎಸ್‌.ಟಿ. ಮೀಸಲಾತಿ; ಮುಖ್ಯಮಂತ್ರಿಯಿಂದ ವಿಳಂಬ ಧೋರಣೆ

03:00 PM Nov 18, 2022 | Team Udayavani |

ಕುಷ್ಟಗಿ: ಕುರುಬ ಸಮುದಾಯಕ್ಕೆ ಎಸ್.ಟಿ. ಮೀಸಲಾತಿಗೆ ಅಧ್ಯಯನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಸಿಎಂ ಬಸವರಾಜ ಬೊಮ್ಮಾಯಿ ವಿಳಂಬ ಧೋರಣೆಯನ್ನು ಹಾಲುಮತ ಮಹಾಸಭಾ ಖಂಡಿಸಿದೆ.

Advertisement

ಶುಕ್ರವಾರ ಇಲ್ಲಿನ ಹಳೆಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ವಿಷಯ ಪ್ರಸ್ತಾಪಿಸಿದ ಕುಷ್ಟಗಿ ತಾಲೂಕು ಹಾಲುಮತ ಮಹಾಸಭಾ ಅಧ್ಯಕ್ಷ ಹೊಳೆಯಪ್ಪ ಕುರಿ ಮಾತನಾಡಿ 2018 ರ ಸಮ್ಮಿಶ್ರ ಸರ್ಕಾರದಲ್ಲಿ ಎಸ್.ಟಿ. ಮೀಸಲಾತಿಗಾಗಿ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಕೇಂದ್ರ ಮೈಸೂರು ಇವರಿಂದ ಕುಲಶಾಸ್ತ್ರೀಯ ಅಧ್ಯಯನಕ್ಕೆ ಆದೇಶಿಸಿ, ಅಧ್ಯಾಯನ ಸಂಪೂರ್ಣವಾಗಿ ಮುಗಿದಿದೆ. ಸರ್ಕಾರವು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡದೇ ಅನಗತ್ಯ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದರು.

ರಾಜ್ಯದಲ್ಲಿರುವ ಕುರುಬ ಸಮುದಾಯಕ್ಕೆ ಎಸ್‌.ಟಿ ಮೀಸಲಾತಿಯಲ್ಲಿ ಅನ್ಯಾಯವಾಗುತ್ತಿದೆ. ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ(ಎಸ್.ಟಿ) ಮೀಸಲಾತಿ ಪಟ್ಟಿಯಲ್ಲಿ ಕುರುಬರಿಗೆ ಸಂಬಂಧಪಟ್ಟ ಗೊಂಡ, ರಾಜಗೊಂಡ, ಜೇನುಕುರುಬ, ಕಾಡುಕುರುಬ, ಕಾಟ್ಟುನಾಯಕನ್, ಕುರುಮನ್, ಮತ್ತು ಕ್ರಸಂ.28 ರಲ್ಲಿ ಕುರುಬ ಎಂಬ ಜಾತಿಗಳು ಇದ್ದರೂ ಸಹ ರಾಜ್ಯವ್ಯಾಪಿ ವಿಸ್ತಾರ ಮಾಡಿಲ್ಲ. ಈ ಅನ್ಯಾಯವನ್ನು ಸರಿಪಡಿಸಲು ಸರ್ಕಾರಗಳಿಗೆ ಮನವಿ ಮಾಡಲಾಗಿದೆ.

ಕಾಗಿನೆಲೆ ಮಹಾಸಂಸ್ಥಾನದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ಹಾಗೂ ಹಾಲುಮತ ಮಹಾಸಭಾದ ರಾಜ್ಯ ಸಮಿತಿ ಪದಾಧಿಕಾರಿಗಳು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಮಾಡಲಾಗಿತ್ತು. ಕನಕದಾಸರ ಜಯಂತಿಯಂದು ಸರ್ಕಾರದಿಂದ ಶುಭಸುದ್ದಿಯನ್ನು ಕುರುಬ ಸಮುದಾಯಕ್ಕೆ ನಿರೀಕ್ಷೆ ಮಾಡಿತ್ತು. ಆದರೆ ಮುಖ್ಯಮಂತ್ರಿಗಳು ನಿರಾಸೆ ಮಾಡಿದ್ದಾರೆ. ಮೀಸಲಾತಿಯ ವಿಷಯದಲ್ಲಿ ಮುಖ್ಯಮಂತ್ರಿಗಳು ವಿಳಂಬ ಮಾಡದೇ ಅಧ್ಯಯನದ ವರದಿಯನ್ನು ಅಂಗೀಕರಿಸಿ ಶಿಫಾರಸ್ಸು ಮಾಡಬೇಕೆಂಬ ಹಕ್ಕೋತ್ತಾಯಕ್ಕೆ ನ.21 ಸೋಮವಾರ ಬೆಂಗಳೂರಿನ ಫ್ರೀಡಂ ಫಾರ್ಕನಲ್ಲಿ ಧರಣಿಯ ಮೂಲಕ ಮುಖ್ಯಮಂತ್ರಿಗಳೇ ಕುರುಬ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ಎಸ್.ಟಿ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದರು.

ಹುಲಗಪ್ಪ ಚೂರಿ, ಸಂಗೊಳ್ಳಿ ರಾಯಣ್ಣ ಯುವ ಬ್ರಿಗೇಡ್ ಅಧ್ಯಕ್ಷ ಮಂಜುನಾಥ ನಾಲಗಾರ, ಮುದಕಪ್ಪ ಚೂರಿ, ಶರಣಪ್ಪ ಚೂರಿ, ತೊಂಡೆಪ್ಪ ಚೂರಿ, ವಿಠ್ಠಲ್ ಚಳಗೇರಿ,ಕೊಳ್ಳಪ್ಪ ಬೂದರ ಮತ್ತಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next