ಕುಷ್ಟಗಿ: ತಾಲೂಕಿನ ನಿಡಶೇಸಿ ಹೊರವಲಯದ ಮಾಳಿ ಪ್ರದೇಶದಲ್ಲಿ ಯುವಕನೋರ್ವ ಮರದಲ್ಲಿ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಸಂಶಯಾಸ್ಪದ ಸಾವು ಪ್ರಕರಣ ಇದೀಗ ತಿರುವು ಪಡೆದುಕೊಂಡಿದೆ.
ನೇಣು ಬಿಗಿದು ಸಾವನಪ್ಪಿದ ವ್ಯಕ್ತಿ ಕಂದಕೂರು ಗ್ರಾಮದ ಲಾರಿ ಚಾಲಕ ಯಮನೂರಪ್ಪ ಬಾವಿಕಟ್ಟಿ (25) ಎಂದು ತಿಳಿದು ಬಂದಿದೆ.
ನಿಡಶೇಸಿ ಗ್ರಾಮದ ಹೊರವಲಯದ ವೀರಶೈವ ರುದ್ರಭೂಮಿ ಸಮೀಪ ಬೈಕ್ ನಿಲ್ಲಿಸಿ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ನಿರ್ಜನ ಪ್ರದೇಶದಲ್ಲಿ ಈ ಶವ ಪತ್ತೆಯಾಗಿದ್ದು, ಲಾರಿ ಚಾಲಕ ಯಮನೂರಪ್ಪ ಎಂದು ಗೊತ್ತಾಗಿದೆ. ಇವರು ಬೈಕ್ ಲಾರಿ ಮಾಲೀಕರದ್ದು, ನಿರ್ಜನ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿರುವುದು ಅನುಮಾನಕ್ಕೆ ಕಾರಣವೆಂದು ಮೃತರ ಸಂಬಂಧಿಕರು ಶಂಕಿಸಿದ್ದಾರೆ.
ಈ ದುರಂತ ಸಾವು ಪ್ರೇಮ ಪ್ರಕರಣದ ಹಿನ್ನೆಲೆ ಇದೆ ಎನ್ನಲಾಗುತ್ತಿದ್ದು, ಸಂಶಯಾಸ್ಪದ ಸಾವು ಎಂದು ಸ್ಥಳೀಯ ಠಾಣೆಗೆ ದೂರು ನೀಡಲಾಗಿದೆ.