Advertisement

Kushtagi: ಮಹಿಳೆ ಸೇರಿದಂತೆ ಸಿಡಿಲಿಗೆ 6 ಕುರಿ ಬಲಿ..!

10:00 PM Apr 25, 2023 | Team Udayavani |

ಕುಷ್ಟಗಿ: 65 ವರ್ಷದ ಮಹಿಳೆ ಸೇರಿದಂತೆ 6 ಕುರಿಗಳು ಸಿಡಿಲಿನ ಆಘಾತಕ್ಕೆ ಬಲಿಯಾಗಿದ್ದು, ಸಿಡಿಲಿನ ಆಘಾತಕ್ಕೆ ಮೂವರು ಅಸ್ವಸ್ಥಗೊಂಡ ಘಟನೆ ತಾಲೂಕಿನ ಶಾಡಲಗೇರಿ ಗ್ರಾಮದಲ್ಲಿ ನಡೆದಿದೆ.

Advertisement

ಭಾರಿ ಬಿರುಗಾಳಿಯೊಂದಿಗೆ ಸಿಡಿಲಿನ ಆರ್ಭಟದಿಂದ ಶುರುವಾಗಿದ್ದು ಹೊಲದಲ್ಲಿದ್ದ ಶಾಂತಮ್ಮ ದುರಗಪ್ಪ ಕಮತರ (65) ಸ್ಥಳದಲ್ಲಿ ಮೃತರಾಗಿದ್ದಾರೆ.

ಪಕೀರಸಾಬ್ ನೈನಾಪೂರ, ರಮಜಾನಬೀ ನೈನಾಪೂರ, ಶಿವು ಆರಿ (28) ಗಾಯಗೊಂಡಿದ್ದು ಹನುಮನಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ದುರ್ಘಟನೆಯಲ್ಲಿ ಪಕೀರಸಾಬ್ ನೈನಾಪೂರ ಅವರಿಗೆ ಸೇರಿದ 5 ಕುರಿ, 1 ಟಗರು ಸಾವನಪ್ಪಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next