Advertisement

ಕುಷ್ಟಗಿ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

02:15 PM Aug 05, 2022 | Team Udayavani |

ಕುಷ್ಟಗಿ: ಕೊರೊನಾದಿಂದ ಪತ್ನಿ‌ ಕಳೆದುಕೊಂಡು ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯೋರ್ವ ಜಮೀ‌ನಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ(ಆ. 5) ಚಿಕ್ಕನಂದಿಹಾಳ ಗ್ರಾಮದಲ್ಲಿ ನಡೆದಿದೆ.

Advertisement

ಮೃತ ವ್ಯಕ್ತಿ ಕುರಿಗಾಯಿ ಯಲ್ಲಪ್ಪ‌ ಕನಕಪ್ಪ‌ ಕುರಬರ (36) ಎಂದು ಗುರುತಿಸಲಾಗಿದೆ.

ಕೊರೊನಾ ಸಂಧರ್ಭ ಪತ್ನಿ‌ ತೀರಿಕೊಂಡಿದ್ದರು. ಆ ಬಳಿಕ ಖಿನ್ನತೆಗೆ ಒಳಗಾಗಿದ್ದ ಈತ ಕುಡಿತದ ಚಟ ಅಂಟಿಸಿಕೊಂಡಿದ್ದ. ಅಗಲಿದ ಪತ್ನಿಯ‌ ಕೊರಗಿನಲ್ಲಿ ಶುಕ್ರವಾರ ಬೆಳಗ್ಗೆ‌ ಜಮೀನಿನಲ್ಲಿ ನೇಣು ಹಾಕಿಕೊಂಡಿದ್ದ. ಈ ಕುರಿತು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next