ಕುಷ್ಟಗಿ: ಬೈಕ್ ದುರಂತದಲ್ಲಿ ತೀವ್ರಗಾಯಗೊಂಡಿದ್ದ ತಾಲೂಕಿನ ಟೆಂಗುಂಟಿ ಗ್ರಾಮದ ಬಾಲಯ್ಯ ಹನುಮಂತಯ್ಯ ಗ್ಯಾನಪ್ಪಯ್ಯನವರ್ ಭಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಅವರಿಗೆ 47 ವರ್ಷ ವಯಸ್ಸಾಗಿತ್ತು. ಕಳೆದ ಫೆ.2 ರಂದು ತಮ್ಮ ಸಹೋದರನೊಂದಿಗೆ ಟೆಂಗುಂಟಿಯಿಂದ ಕುಷ್ಟಗಿ ಬರುವ ಸಂದರ್ಭದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಬಳಿ ಈ ದುರಂತ ಸಂಭವಿಸಿದೆ.
ಈ ರಸ್ತೆ ಕಾಮಗಾರಿ ನಡೆಯುತ್ತಿದ್ದು, ದೊಡ್ಡ ಗಾತ್ರದ ಗುಂಡಿಯ ಮೇಲೆ ಬೈಕ್ ಸಂಚರಿಸಿದ್ದರಿಂದ ಹಿಂಬದಿಯ ಸವಾರ ಬಾಲಯ್ಯ ಗ್ಯಾನಪ್ಪನವರ್ ಬಿದ್ದು ತಲೆಗೆ ತೀವ್ರ ಗಾಯಗೊಂಡು ರಕ್ತಸ್ರಾವವಾಗಿತ್ತು.
ನಂತರ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಸಂಜೆ ಕೊನೆಯುಸಿರೆಳೆದರು.
Related Articles
ಮೃತರ ಅಂತ್ಯಕ್ರಿಯೆ ಭಾನುವಾರ 2 ಗಂಟೆ ನಡೆಯಲಿದೆ. ಹಾಲುಮತ ಸಮಾಜದ ಗುರು ಬಾಲಯ್ಯ ಗ್ಯಾನಪ್ಪಯ್ಯನವರ ಅಕಾಲಿಕ ನಿಧನದಿಂದಾಗಿ ಟೆಂಗುಂಟಿ ಗ್ರಾಮದಲ್ಲಿ ದು:ಖಿತರಾಗಿದ್ದಾರೆ.