Advertisement

ಕುಷ್ಟಗಿ: ಸಿದ್ದರಾಮಯ್ಯ ಹೀರೋ, ಯಾವತ್ತಿಗೂ ಸೋಲೋದೇ ಇಲ್ಲ: ನಟ ಎಸ್. ನಾರಾಯಣ

03:37 PM Jan 21, 2023 | Team Udayavani |

ಕುಷ್ಟಗಿ: ಸಿದ್ದರಾಮಯ್ಯ ಹೀರೋ, ಯಾವತ್ತಿಗೂ ಸೋಲೋದೇ ಇಲ್ಲ. ಅವರದ್ದು ದೊಡ್ಡ ಗೆಲುವು. ಗೆಲವು ಒಂದೇ ಅಂತಿಮ ಅಂತರ ಮುಖ್ಯವಾಗದು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಸದಸ್ಯ, ಸಿನಿಮಾ ನಟ ಎಸ್. ನಾರಾಯಣ ಹೇಳಿದರು.

Advertisement

ಕಲಬುರಗಿಯಿಂದ ಬೆಂಗಳೂರಿಗೆ ತೆರಳುವ ಮಾರ್ಗದಲ್ಲಿ ಇಲ್ಲಿನ ಸರ್ಕ್ಯೂಟ್ ಹೌಸ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಎಲ್ಲೆಡೆ ವ್ಯಾಪಕವಾಗಿ ಕಾಂಗ್ರೆಸ್ ಅಲೆ ಇದೆ. ಹೀಗಾಗಿ ಕಾಂಗ್ರೆಸ್ ಬಹು ದೊಡ್ಡ ಪಕ್ಷವಾಗಿ ಹೊರ ಹೊಮ್ಮುವ ವಿಶ್ವಾಸ ವ್ಯಕ್ತಪಡಿಸಿದ ಅವರು, ನಮ್ಮ ಪಕ್ಷವೇ ಸರ್ಕಾರ ರಚಿಸಲಿದೆ ಎಂದರು.

ಸಿದ್ದರಾಮಯ್ಯ..ಡಿ.ಕೆ.ಶಿವಕುಮಾರ ಯಾರಾಗಲಿದ್ದಾರೆ ಮುಂದಿನ ಮುಖ್ಯಮಂತ್ರಿ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕೂಸು ಹುಟ್ಟುವ ಮುಂಚೆ ಕುಲಾಯಿ ಯಾಕ್ರೀ ಎಂದು‌ ಹಾಸ್ಯ ಚಟಾಕಿ ಹಾರಿಸಿದರು.

ಪ್ರಸ್ತುತ ರಾಜಕಾರಣದಲ್ಲಿ ಅಸಂವಿಧಾನಿಕ ಪದ ಬಳಕೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ನಾಲಿಗೆ ನಾಗರೀಕತೆ ಹೇಳುತ್ತದೆ. ಜನಪ್ರತಿನಿಧಿಗಳು ಆಡುವ ಮಾತು ಸಮಾಜದ ಮೇಲೆ ಪರಿಣಾಮ ಬೀರಲಿದೆ. ಜನಪ್ರತಿನಿಧಿಗಳು ಏನೇ ಮಾತನಾಡಿದರೂ ನಾಲಿಗೆಯ ಮೇಲೆ ನಿಗಾ ಇಟ್ಟು ಮಾತನಾಡಬೇಕು. ಒಮ್ಮೆ ಅನಾಗರೀಕವಾಗಿ ಮಾತನಾಡಿದ್ದನ್ನು ವಾಪಸ್ಸು ಪಡೆಯಲು ಸಾದ್ಯವಿಲ್ಲ.‌ ಹೀಗಾಗಿ ಎಚ್ಚರಿಕೆಯಿಂದ ಮಾತನಾಡಬೇಕು ಅದು ಜನಪ್ರತಿನಿಧಿಗಳ ಕರ್ತವ್ಯ ಆಗಿದೆ ಎಂದರು.

Advertisement

ಕಳೆದ ಚುನಾವಣೆಯಲ್ಲಿ ಸಣ್ಣ ಎಡವಟ್ಟಿನಿಂದಾಗಿ ನಮ್ಮ‌ ಪಕ್ಷಕ್ಕೆ ಹಿನ್ನೆಡೆಯಾಗಿರುವ ಅರಿವು ಜನಸಾಮಾನ್ಯರ ಮೇಲೆ ಆಗಿದೆ. ಹೀಗಾಗಿ ನಮ್ಮ ಪಕ್ಷವೂ ಹೆಚ್ಚು ಸ್ಥಾನಗಳ ಗೆಲುವು ಸಾಧಿಸಲಿದೆ ಎಂದರು.

ಕಾಂಗ್ರೆಸ್ ಯುವ ಮುಖಂಡ ದೊಡ್ಡಬಸನಗೌಡ ಪಾಟೀಲ ಬಯ್ಯಾಪೂರ, ಲಾಡ್ಲೆಮಷಾಕ್ ದೋಟಿಹಾಳ, ಪುರಸಭೆ ಸದಸ್ಯರಾದ ಸಯ್ಯದ ಖಾಜಾ ಮೈನುದ್ದೀನ ಮುಲ್ಲಾ, ಚಿರಂಜೀವಿ ಹಿರೇಮಠ,ಮಹಿಬೂಬಸಾಬ್ ಕಮ್ಮಾರ ರಾಮಣ್ಣ ಬಿನ್ನಾಳ, ಉಮೇಶ ಮಂಗಳೂರು, ಹನುಮಂತಪ್ಪ ನಾಯಕ್, ಮಂಜುನಾಥ ಕಟ್ಟಿಮನಿ, ಶೌಕತ್ ಕಾಯಿಗಡ್ಡಿ, ಹನುಮೇಶ ಬೋವಿ ಬಸವರಾಜ ತುಂಬರಗುದ್ದಿ ಮತ್ತಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next