ಕುಷ್ಟಗಿ: ತಾಲೂಕಿನ ಕನ್ನಾಳ ಗುಡ್ಡದಲ್ಲಿ ಶನಿವಾರ (ಜ.14) ರಾತ್ರಿ ನಾಲ್ಕು ವರ್ಷದ ಹೆಣ್ಣು ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಸೆರೆಯಾಗಿದೆ.
ಕನ್ನಾಳ ಗುಡ್ಡದ ಪ್ರದೇಶದಲ್ಲಿ ಚಿರತೆಯ ಚಲನವಲನವನ್ನು ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಸಿಬ್ಬಂದಿ ನಾಲ್ಕೈದು ದಿನಗಳ ಹಿಂದೆಯೇ ಚಿರತೆಯ ಹೆಜ್ಜೆ ಗುರುತು ಪತ್ತೆ ಹಚ್ಚಿದ್ದರು. ಇದರಿಂದ ಚಿರತೆಯನ್ನು ಬೋನಿಗೆ ಕೆಡವಲು ಸುಲಭವಾಯಿತು.
ಚಿರತೆ ಚಲನವಲನದ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಬೋನಿನಲ್ಲಿ ಸೆರೆಯಾದ ಚಿರತೆ ಸುರಕ್ಷಿತ ಪ್ರದೇಶಕ್ಕೆ ರವಾನಿಸುವ ಮಾಹಿತಿ ಇದೆ.
ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಚೈತ್ರಾ ಮೆಣಸಿನಕಾಯಿ, ಉಪ ವಲಯ ಅರಣ್ಯಾಧಿಕಾರಿ ರಿಯಾಜ್ ಗಣಿ, ಹನುಮಂತಪ್ಪ, ಅರಣ್ಯ ಗಸ್ತು ಅಧಿಕಾರಿ ಮಹಾಂತೇಶ ರಡ್ಡೇರ್, ಸ್ಥಳೀಯ ಸಂತೋಷ ಸರನಾಡಗೌಡರು ಹಾಗೂ ಮತ್ತಿತರಿದ್ದರು.
Related Articles
ಈ ಕುರಿತು ಸ್ಥಳೀಯ ಸಂತೋಷ ಸರನಾಡಗೌಡ್ರು ಉದಯವಾಣಿಯೊಂದಿಗೆ ಪ್ರತಿಕ್ರಿಯಿಸಿ, ಕಳೆದ ನಾಲ್ಕು ದಿನಗಳ ಹಿಂದೆ ಕನ್ನಾಳ ಗುಡ್ಡದಲ್ಲಿ ಚಿರತೆ ಕಂಡು ಬಂದಿತ್ತು. ಆದರೆ ಗುಡ್ಡ ಬಿಟ್ಟು ಕೆಳಗೆ ಇಳಿದಿರಲಿಲ್ಲ. ಕಳೆದ ಶನಿವಾರ ಅಹಾರಕ್ಕಾಗಿ ಕೆಳಗೆ ಇಳಿದು ಬಂದಾಗ ಬೋನಿನಲ್ಲಿ ಸೆರೆಯಾಗಿದೆ ಎಂದು ತಿಳಿಸಿದ್ದಾರೆ.