Advertisement

ಕುಷ್ಟಗಿ ಪುರಸಭೆ ಬಜೆಟ್ ಪೂರ್ವ ಸಭೆ

05:38 PM Feb 06, 2023 | Team Udayavani |

ಕುಷ್ಟಗಿ: ಕುಷ್ಟಗಿ ಪುರಸಭೆ ವ್ಯಾಪ್ತಿಯಲ್ಲಿ ನೀರು ಸರಬರಾಜು ನಿರ್ವಹಣೆಗೆ ಕೆ.ಯು.ಡಬ್ಲ್ಯೂ.ಎಸ್ ಬಿ. (ಕರ್ನಾಟಕ ನಗರ‌ ನೀರು ಸರಬರಾಜು ಒಳ ಚರಂಡಿ ಮಂಡಳಿ) ಗೆ ಪ್ರತಿ ತಿಂಗಳ 8.50 ಲಕ್ಷ ರೂ. ಪಾವತಿಸಬೇಕು. ನೀರು ಬಳಕೆದಾರರಿಂದ 1 ಲಕ್ಷ ರೂ. ಸಂಗ್ರಹವಾಗುವುದಿಲ್ಲ ಎಂದು ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ ಕಳವಳ‌ ವ್ಯಕ್ತಪಡಿಸಿದರು.

Advertisement

ಇಲ್ಲಿನ ಪುರಸಭೆ ಆವರಣದಲ್ಲಿ 2023-24 ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸ್ಥಳೀಯರ ಪ್ರಶ್ನೆ ಪ್ರತಿಕ್ರಿಸಿದ ಅವರು, ಕುಷ್ಟಗಿ ಪಟ್ಟಣದಲ್ಲಿ 2 ರಿಂದ 7 ವಾರ್ಡ ಗಳಲ್ಲಿ ಕೃಷ್ಣಾ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಂಡಿದೆ. ಪ್ರಧಾನಮಂತ್ರಿ ಅಮೃತ ಯೋಜನೆಯಲ್ಲಿ 1ನೇ ವಾರ್ಡ್ ಹಾಗೂ 8 ರಿಂದ 23 ವಾರ್ಡಗಳಿಗೆ ಪೈಪಲೈನ್ ವಿಸ್ತರಿಸಲಾಗುವುದು ಎಂದ ಅವರು ನೀರು ನಿರ್ವಹಣೆಗೆ ಆದ್ಯತೆ ನೀಡಿದರು ಜನ ಸಹಕರಿಸುತ್ತಿಲ್ಲ. ನೀರು ಕಣ್ಮುಂದೆ ಪೋಲಾಗುತ್ತಿದ್ದರೂ ಸಾರ್ವಜನಿಕರು ಗಮನಿಸಿ ಬಂದ್ ಮಾಡುವುದಿಲ್ಲ. ಕುಡಿಯುವ ನೀರು ಚರಂಡಿಗೆ ಹರಿದು ಹಾಳಾಗುತ್ತಿದೆ. ಅಲ್ಲದೇ ನೀರಿನ ಕರ ಪಾವತಿಸುತ್ತಿಲ್ಲ ಸುಮಾರು 1.50 ಕೋಟಿ ನಿರೀಕ್ಷೆಯಲ್ಲಿ ಕೇವಲ 30ರಿಂದ 35 ಲಕ್ಷ ರೂ. ಜಮೆಯಾಗುತ್ತಿದೆ. 10 ವರ್ಷ, 15 ವರ್ಷ, 20 ವರ್ಷದ ಕರ ಪಾವತಿಸಲಾಗಿಲ್ಲ ಎಂದರು.

ಕುಷ್ಟಗಿ ಪಟ್ಟಣದಲ್ಲಿ 10 ಸುಲಭ ಮಾದರಿ ಶೌಚಾಲಯ ನಿರ್ಮಿಸಲಾಗಿದ್ದು ಬಳಕೆಯಾಗದ ಬಗ್ಗೆ ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ ಪ್ರತಿಕ್ರಿಯಿಸಿ ಪ್ರತಿ ಶೌಚಾಲಯ ನಿರ್ವಹಣೆಗೆ ಪ್ರತಿ ತಿಂಗಳು 30 ಸಾವಿರ ರೂ. ನಿರ್ವಹಣೆ ಅಷ್ಟು ಮೊತ್ತಕ್ಕೆ ಸಾಲ ಮಾಡುವ ಪರಿಸ್ಥಿತಿ ಇದೆ ಎಂದರು.

ಕುಷ್ಟಗಿ ಪಟ್ಟಣದ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗಿಡಗಳನ್ನು ತೆರವು ಮಾಡಲಾಗಿದ್ದು, ಒಂದು ಗಿಡ ಕಡಿದರೆ 10 ಗಿಡ ನೆಟ್ಟು 2 ವರ್ಷದವರೆಗೂ ಪೋಷಣೆಗೆ ಅರಣ್ಯ ಇಲಾಖೆಗೆ16 ಲಕ್ಷ ರೂ ಪಾವತಿಸಲಾಗಿದೆ ಎಂದರು. ಇನ್ನುಳಿದಂತೆ ಸ್ಥಳೀಯರು ಪುರಸಭೆ ಸದಸ್ಯರು ಕುಷ್ಟಗಿ ಪಟ್ಟಣ ಅಭಿವೃದ್ಧಿ ಪೂರಕವಾಗಿ ಸಲಹೆ ನೀಡಿದರು.

ಮುಖ್ಯಾಧಿಕಾರಿ ಬಿ.ಟಿ. ಬಂಡಿ ಒಡ್ಡರ, ಉಪಾಧ್ಯಕ್ಷೆ ಹನುಮವ್ವ ಕೋರಿ, ಸದಸ್ಯರಾದ ಕಲ್ಲೇಶ ತಾಳದ್, ಸಯ್ಯದ್ ಖಾಜಾ‌ ಮೈನುದ್ದೀನ್ ಮುಲ್ಲಾ, ಬಸವರಾಜ ಬುಡಕುಂಟಿ, ವಿಜಯಲಕ್ಷ್ಮಿ ಕಟ್ಟಿಮನಿ, ಇಮಾಂಬಿ ಕಲಬುರಗಿ ಸೇರಿದಂತೆ ನಾಮನಿರ್ದೇಶಿತ ಸದಸ್ಯರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next