Advertisement

ರಾಜ್ಯದ ಜನರಿಗೆ ‌ಪ್ರಾದೇಶಿಕ ಪಕ್ಷಗಳ‌ ಒಲವು ಕಮ್ಮಿ; ಶಾಸಕ ಬಯ್ಯಾಪೂರ

04:07 PM Dec 30, 2022 | Team Udayavani |

ಕುಷ್ಟಗಿ: ಆಂಧ್ರ, ತಮಿಳುನಾಡು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳಿಗೆ ನೆಚ್ಚಿಕೊಂಡಷ್ಟು ನಮ್ಮ ರಾಜ್ಯದ ಜನತೆ ಪ್ರಾದೇಶಿಕ ಪಕ್ಷಗಳನ್ನು‌ ನೆಚ್ಚಿಕೊಂಡಿಲ್ಲ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.

Advertisement

ತಾವರಗೇರಾ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಸಮರ್ಥ ಅಭ್ಯರ್ಥಿ, ಸ್ಥಳೀಯ ವಾತವರಣ ಆಧರಿಸಿ ಪ್ರಾದೇಶಿಕ ಪಕ್ಷ ರಾಷ್ಟ್ರೀಯ ಪಕ್ಷಗಳ ಪರಿಣಾಮವಾಗುವ ಸಾದ್ಯತೆ ಇದೆ ಎಂದು ಹೇಳಿದರು.

ಪ್ರಸ್ತುತವಾಗಿ ಜೆಡಿಎಸ್ ಉತ್ತರ ಕರ್ನಾಟಕದಲ್ಲಿ ಪ್ರಾಬಲ್ಯ ಕಳೆದುಕೊಂಡಿದ್ದು, ದಕ್ಷಿಣ ಕರ್ನಾಟಕದಲ್ಲಿ ತನ್ನ ಪ್ರಾಬಲ್ಯ ಕೆಲವೆಡೆ ಉಳಿಸಿಕೊಂಡಿದೆ. ಜನಾರ್ದನ ರಡ್ಡಿ ಅವರ ಕರ್ನಾಟಕ ರಾಜ್ಯ ಪ್ರಗತಿ ಪಕ್ಷ ಪ್ರಾದೇಶಿಕ ಪಕ್ಷದಿಂದ ಬಿಜೆಪಿ, ಕಾಂಗ್ರೆಸ್ ಗೆ ಬಹಳಷ್ಟು ಅಲ್ಲದಿದ್ದರೂ ಶೇ.5ರಿಂದ 10 ರಷ್ಟು ಪರಿಣಾಮದ ಸಾದ್ಯತೆ ಇದೆ ಎಂದರು.

ಈ ಹಿಂದೆ ಶ್ರೀರಾಮುಲು ಅವರ ಬಿ ಎಸ್ ಆರ್ ಪಕ್ಷ ಹಾಗೂ ಯಡಿಯೂರಪ್ಪ ನವರ ಕೆ.ಜೆ.ಪಿ. ಪ್ರಾದೇಶಿಕ ಪಕ್ಷಗಳು ಹುಟ್ಟಿಕೊಂಡ ಒಂದೇ ವರ್ಷದಲ್ಲಿ ರಾಷ್ಟ್ರೀಯ ಪಕ್ಷದಲ್ಲಿ ವಿಲೀನಗೊಂಡಿದ್ದವು. ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್,  ದೇವೇಗೌಡ ಅವರ ಶ್ರಮದಿಂದ ಜನತಾ ಪಕ್ಷ, ಜನತಾದಳ ರಾಜ್ಯದಲ್ಲಿ ಯಶಸ್ವಿಯಾಗಿತ್ತು.1994 ರಲ್ಲಿ ಪ್ರಾದೇಶಿಕ ಪಕ್ಷದಿಂದ ಪ್ರಥಮ ಬಾರಿಗೆ ಶಾಸಕನಾಗಿದ್ದೆ ಎಂದು ಹೇಳಿದರು.

2013 ರಲ್ಲಿ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ‌‌ ಪ್ರಾದೇಶಿಕ ಪಕ್ಷ ಕೆಜೆಪಿ ಅಭ್ಯರ್ಥಿ ಪುರದಪ್ಪ 1, 100 ಓಟು, ಕ್ಷೇತ್ರದಲ್ಲಿ ದುಂಧು ವೆಚ್ಚ ಮಾಡಿದ್ದ ಬಿಎಸ್ ಆರ್  ಅಭ್ಯರ್ಥಿ ರಾಜಶೇಖರಗೌಡ ಗೋನಾಳ 17ಸಾವಿರ ಓಟು ಪಡೆದಿದ್ದರು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next