Advertisement

ಕುಷ್ಟಗಿ: ಅಪ್ರಾಪ್ತ ವಯಸ್ಕಳನ್ನು ಪುಸಲಾಯಿಸಿ ಅತ್ಯಾಚಾರ ; ಆರೋಪಿ ಬಂಧನ

07:17 PM Sep 30, 2022 | Team Udayavani |

ಕುಷ್ಟಗಿ: ಅಪ್ರಾಪ್ತ ವಯಸ್ಕ ಬಾಲಕಿಯನ್ನು ಮದುವೆಯಾಗುವುದಾಗಿ ಪುಸಲಾಯಿಸಿ ಅತ್ಯಾಚಾರ ಗೈದ ಟ್ರ್ಯಾಕ್ಟರ್ ಚಾಲಕನನ್ನು ಬಂಧಿಸಲಾಗಿದೆ.

Advertisement

ಬಂಧಿತ ಆರೋಪಿ ಕುಷ್ಟಗಿ ತಾಲೂಕಿನ ನವಲಹಳ್ಳಿ ಗ್ರಾಮದ ರವಿಕುಮಾರ ಪೂಜಾರಿ(22) ಎನ್ನುವವನಾಗಿದ್ದಾನೆ.ಕುಷ್ಟಗಿ ಪೊಲೀಸರು ಪೋಕ್ಸೋ ಕಾಯಿದೆ ಅಡಿಯಲ್ಲಿ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಎರಡು ವರ್ಷಗಳ ಹಿಂದೆ, ಕಂದಕೂರು ಗ್ರಾಮದ ಅಜ್ಜಿ ಮನೆಯಲ್ಲಿದ್ದ ಈ ಯುವಕ ಜೀವನೋಪಾಯಕ್ಕೆ ಟ್ರ್ಯಾಕ್ಟರ್ ಚಲಾಯಿಸಿಕೊಂಡಿದ್ದ. ಅದೇ ಗ್ರಾಮದ ಬಾಲಕಿ ಮನೆಯ ಮುಂದೆ ಟ್ರ್ಯಾಕ್ಟರ್ ನಲ್ಲಿ ಸಂಚರಿಸುವ ವೇಳೆ ಪರಿಚಯ ಮಾಡಿಕೊಂಡಿದ್ದ. ನೀನು ನನಗೆ ಇಷ್ಟವಾಗಿದ್ದಿ, ನಿನ್ನನ್ನೇ ಪ್ರೀತಿಸ್ತೇನೆ, ಮದುವೆಯಾಗೋಣ ಎಂದು ಕಳೆದ ಮೇ 3ರಂದು ಕಂದಕೂರ ಗ್ರಾಮದಿಂದ ಬೆಂಗಳೂರಿಗೆ ಪೋಷಕರ ಕಣ್ತಪ್ಪಿಸಿ ಕರೆದೊಯ್ದು ಜಾಲಹಳ್ಳಿ ಕ್ರಾಸ್ ನ ಸಿಂಗಪುರ ಏರಿಯಾದಲ್ಲಿ ಶೆಡ್ ನಲ್ಲಿ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಮಗಳು ಕಾಣೆಯಾದ ಹಿನ್ನೆಲೆಯಲ್ಲಿ ಮೇ 7ರಂದು ದೂರು ನೀಡಿದ್ದರು. ದೂರನ್ನು ದಾಖಲಿಸಿಕೊಂಡಿರುವ ಪಿಎಸೈ ಮೌನೇಶ ರಾಠೋಡ್ ಅವರು, ಸೆ.23ರಂದು ಅಪಹೃತ ಬಾಲಕಿ ಹಾಗೂ ಆರೋಪಿಯನ್ನು ಕೊಪ್ಪಳ ತಾಲೂಕಿನ ಹುಲಿಗಿಯಲ್ಲಿ ವಶಕ್ಕೆ ತೆಗೆದುಕೊಂಡಿದ್ದರು.

ಬಾಲಕಿಗೆ 17 ವರ್ಷ 9 ತಿಂಗಳಾಗಿರುವ ಹಿನ್ನೆಲೆಯಲ್ಲಿ ಆರೋಪಿ ರವಿ ವಿರುದ್ದ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ ಎಂದು ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಮಾಹಿತಿ ನೀಡಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next