ಕುಷ್ಟಗಿ: ಮಾ.5 ಹಾಗೂ 6 ರಂದು ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿ ನಡೆಯಲಿರುವ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಹ್ವಾನ ಪತ್ರ ಅದ್ವಾನ ಸೃಷ್ಟಿಸಿದೆ. ಇಹಲೋಕ ತ್ಯಜಿಸಿರುವ ಕಲಾವಿದರೊಬ್ಬರಿಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚೌಡಕಿ ಪದ ಹಾಡಲು ಅವಕಾಶ ಕಲ್ಪಿಸಿದೆ.
ಸಮ್ಮೇಳನದ ಅಹ್ವಾನ ಪತ್ರದಲ್ಲಿ ಮುದ್ರಿಸಿದಂತೆ ಮಾ.6 ರಂದು ರಾತ್ರಿ ನಿಗದಿಯಾದ ಕಾರ್ಯಕ್ರಮದಲ್ಲಿ ತೆಗ್ಗಿಹಾಳದ ಚೌಡಕಿ ಕಲಾವಿದ ರಾಮಣ್ಣ ಚೌಡಕಿ ಭಾಗವಹಿಸಲಿದ್ದಾರೆ ಎಂದು ನಮೂದಿಸಲಾಗಿದೆ. ಆದರೆ ಕಲಾವಿದ ರಾಮಣ್ಣ ಚೌಡಕಿ ನಿಧನರಾಗಿ ವರ್ಷ ಗತಿಸಿದೆ. ಅವರ ಅಂತಿಮ ದರ್ಶನಕ್ಕೆ ಸ್ಥಳೀಯ ಕಸಾಪ ಪ್ರತಿನಿಧಿಗಳು ಹೋಗಿ ಬಂದಿದ್ದಾರೆ. ಆದಾಗ್ಯೂ ಸಮ್ಮೇಳನದ ಅಹ್ವಾನ ಪತ್ರಿಕೆಯಲ್ಲಿ ರಾಮಣ್ಣ ಚೌಡಕಿ ಹೆಸರು ಇರುವುದು ಅಚ್ಚರಿ ಮೂಡಿಸಿದೆ.
ಸ್ಥಳೀಯ ಕಲಾವಿದರಿಗೆ ಅವಕಾಶ ಇಲ್ಲ ಎನ್ನುವ ಆರೋಪ ಎದುರಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತು ನಿಧನರಾದ ಕಲಾವಿದರಿಗೆ ಅವಕಾಶ ನೀಡಿರುವುದನ್ನು ಪ್ರಶ್ನಿಸಿದ್ದಾರೆ. ನಿಧನರಾದ ಕಲಾವಿದ ಹನುಮಸಾಗರ ಸಮ್ಮೇಳನ ವೇದಿಕೆಯಲ್ಲಿ ಅದ್ಹೇಗೆ ಚೌಡಕಿ ಪದಗಳನ್ನು ಹಾಡಲಿದ್ದಾರೆ ಎಂಬುದು ಕಾದು ನೋಡಬೇಕು ಎಂಬ ತೀಕ್ಷ್ಣವಾದ ಟೀಕೆ ವ್ಯಕ್ತವಾಗಿದೆ.