Advertisement

ವೈದ್ಯರಿಗೆ ಸೋಂಕು; ಕುಷ್ಟಗಿ ಲಿಯೋ ಕಾಲೋನಿ ಲಾಕ್‌

04:47 PM Jun 27, 2020 | Naveen |

ಕುಷ್ಟಗಿ: ತಾವರಗೇರಾ ಆಸ್ಪತ್ರೆ ಸಿಬ್ಬಂದಿಗೆ ಕೋವಿಡ್ ಸೋಂಕು ದೃಢವಾಗಿದ್ದು, ಕುಷ್ಟಗಿಯ ಲಿಯೋ ಕಾಲೋನಿಯನ್ನು ಸೀಲ್‌ಡೌನ್‌ ಮಾಡಲಾಗಿದೆ.

Advertisement

ತಾವರಗೇರಾ ಸಮುದಾಯ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆಯಲ್ಲಿರುವ ಈ ವೈದ್ಯ, ಕುಷ್ಟಗಿ ಪಟ್ಟಣದ 1ನೇ ವಾರ್ಡ್‌ ವ್ಯಾಪ್ತಿಯ ಲಿಯೋ ಕಾಲೋನಿಯ ನಿವಾಸಿಯಾಗಿದ್ದಾರೆ. ವೈದ್ಯರಿಗೆ ಕೋವಿಡ್ ಸೋಂಕು ದೃಢವಾಗುತ್ತಿದ್ದಂತೆ ಪುರಸಭೆ ಮುಖ್ಯಾಧಿಕಾರಿ ಅಶೋಕ ಪಾಟೀಲ ನೇತೃತ್ವದಲ್ಲಿ ವೈದ್ಯನ ಮನೆ ಸಂಪರ್ಕಿಸುವ ರಸ್ತೆ ಹಾಗೂ ಲಿಯೋ ಕಾಲೋನಿ ಪ್ರವೇಶದ ಮಾರ್ಗಗಳನ್ನು ಸೀಲ್‌ಡೌನ್‌ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಲಿಯೋ ನಗರದ 100 ಮೀಟರ್‌ ವ್ಯಾಪ್ತಿಯನ್ನು ಕಂಟೇನ್ಮೆಂಟ್‌ ಝೋನ್‌ ಎಂದು ಗುರುತಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next