Advertisement

ಕುಷ್ಟಗಿ: ಹಾರ್ನ್ ಮಾಡಿದ್ದಕ್ಕೆ ಹೆಡ್ ಕಾನ್‌ಸ್ಟೇಬಲ್ ಗೆ ಥಳಿತ

09:39 PM Sep 17, 2022 | Team Udayavani |

ಕುಷ್ಟಗಿ:ದಾರಿಗಾಗಿ ಬೈಕ್ ಹಾರ್ನ್ ಮಾಡಿದ್ದಕ್ಕೆ ಇಬ್ಬರು ವ್ಯಕ್ತಿಗಳು, ಹೆಡ್ ಕಾನ್‌ಸ್ಟೇಬಲ್ ಗೆ ಥಳಿಸಿರುವ ಘಟನೆ ಕುಷ್ಟಗಿ ಪಟ್ಟಣದ ಶಾಖಾಪೂರ ರಸ್ತೆಯಲ್ಲಿ ಸಂಜೆ ನಡೆದಿದೆ. ಹಲ್ಲೆ ಆರೋಪದ ಹಿನ್ನೆಲೆಯಲ್ಲಿ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

Advertisement

ಪಟ್ಟಣದ ಹೊರವಲಯದ ಶಾಖಾಪೂರ ರಸ್ತೆಯ ವಾಸವಿ ನಗರದ ಭಾರತ್ ಗ್ಯಾಸ್ ಗೋದಾಮು ಬಳಿ ರಸ್ತೆಯ ಮದ್ಯೆ ಕೆಟ್ಟು ನಿಂತಿದ್ದ ಕ್ಯಾಂಟರ್ ವಾಹನದ ಜಾಕ್ ಏರಿಸುವ ಕೆಲಸದಲ್ಲಿ ಶರಣಪ್ಪ ವೀರಭದ್ರಪ್ಪ ಸೊಬರದ್ ಹಾಗೂ ಶರಣಪ್ಪ ಚನ್ನಬಸಪ್ಪ ಹೊಸವಕ್ಕಲ್ ನಿರತರಾಗಿದ್ದರು. ಆಗ ಹೆಡ್ ಕಾನ್ಸೇಟೇಬಲ್ ದಾರಿಗಾಗಿ ಬೈಕ್ ಹಾರ್ನ್ ಮಾಡಿದ್ದಾರೆ. ಇದರಿಂದ ಕುಪಿತರಾದ ಇವರೀರ್ವರು ಕೈಯಲ್ಲಿ ಸ್ಕ್ರೂ ಡ್ರೈವರ್, ಸ್ಪಾನರ್ ಹಿಡಿದು ಹಲ್ಲೆ ನಡೆಸಿದರಲ್ಲದೇ ನೆಲಕ್ಕೆ ಕೆಡವಿ ಸ್ಕ್ರೂ ಡ್ರೈವರ್ ನಿಂದ ಚುಚ್ಚಲು ಯತ್ನಿಸಿದ್ದಾರೆ.

ಪೊಲೀಸ್ ಎಂದರೂ ಕೇಳದೇ ಅವಾಶ್ಚವಾಗಿ ನಿಂದಿಸಿ, ಅಂಗಿ ಹಿಡಿದು ಎಳೆದಾಡಿದ್ದಾರೆ. ಹೆಡ್ ಕಾನ್‌ಸ್ಟೇಬಲ್ ದೂರಿನ ಮೇರೆಗೆ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಪಿಎಸೈ ಮೌನೇಶ ರಾಠೋಡ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next