ಕುಷ್ಟಗಿ: ತಾಲೂಕು ಬಿಜೆಪಿ ಅಧ್ಯಕ್ಷ ಅಧ್ಯಕ್ಷ ಬಸವರಾಜ ಹಳ್ಳೂರು ಕುಷ್ಟಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಆಕಾಂಕ್ಷಿಯಾಗಿ ಹೊರಹೊಮ್ಮಿದ್ದಾರೆ.
ಇಲ್ಲಿಯವರೆಗೂ ಬಿಜೆಪಿಯಿಂದ ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹೊರತಾಗಿಯೂ ಯಾರು ಆಕಾಂಕ್ಷಿ ಆಗಿರಲಿಲ್ಲ. ಇದೀಗ ಸ್ವಪಕ್ಷದವರೇ ದೊಡ್ಡನಗೌಡ ಪಾಟೀಲರಿಗೆ ಪೈಪೋಟಿ ನೀಡಿರುವುದು ಗೊತ್ತಾಗಿದೆ.
ವೀರಶೈವ ಲಿಂಗಾಯತ 65 ಸಾವಿರ ಮತದಾರರಿದ್ದು ಈ ಪೈಕಿ ಪಂಚಮಸಾಲಿ ಸಮುದಾಯದ 35 ಸಾವಿರ ಮತಗಳಿದ್ದು ಬಿಜೆಪಿಯಲ್ಲಿ ಕಳೆದ2004 ರಿಂದ ಸೇವೆಯಲ್ಲಿದ್ದು 2004 ಹಾಗೂ 2013ರಲ್ಲಿ ದೊಡ್ಡನಗೌಡ ಪಾಟೀಲ ಶಾಸಕರಾಗಲು ಶ್ರಮಿಸಿದ್ದು, ಈ ಬಾರಿ ತಮಗೆ ಅವಕಾಶ ಕಲ್ಪಸಬೇಕೆಂದು ಬಿಜೆಪಿ ಹೈಕಮಾಂಡ್ ಬೇಡಿಕೆ ಮುಂದಿಟ್ಟಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಸೇರಿದಂತೆ ಪ್ರಮುಖರಿಗೆ ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ದಿಸುವ ಅವಕಾಶದ ಬಗ್ಗೆ ಪ್ರಸ್ತಾಪಿಸಿದ್ದು ಇವರ ಪ್ರಸ್ತಾಪಕ್ಕೆ ನೋಡೋಣ…ಎಂಬ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಸವರಾಜ ಹಳ್ಳೂರು ಮಾತನಾಡಿ, ಈ ಬಾರಿ ಕುಷ್ಟಗಿ ವಿಧಾನಸಭಾ ಕ್ಷೇತ್ರದಿಂದ ನಾನೂ ಪ್ರಬಲ ಅಕಾಂಕ್ಷಿ ನನಗೆ ಟಿಕೇಟ್ ಕೊಟ್ಟರೆ ಸ್ಪರ್ದಿಸುವೆ. ಟಿಕೇಟ್ ನೀಡದೇ ಇದ್ದಲ್ಲಿ ಹೈಕಮಾಂಡ್ ನಿಯೋಜಿಸುವ ಅಭ್ಯರ್ಥಿ ಪರ ಕೆಲಸ ನಿರ್ವಹಿಸುವೆ ಎಂದಿದ್ದಾರೆ.