Advertisement

ಮೈಸೂರು: ದಸರಾ ಆನೆಗಳಿಗೆ ಕುಶಾಲ ತೋಪು ತಾಲೀಮು

12:47 PM Sep 30, 2021 | Team Udayavani |

ಮೈಸೂರು: ದಸರಾ ಮಹೋತ್ಸವದಲ್ಲಿ ಭಾಗವಹಿಸಿರುವ ಆನೆಗಳಿಗೆ ಗುರುವಾರ ಕುಶಾಲ ತೋಪಿನ ತಾಲೀಮು ಯಶಸ್ವಿಯಾಗಿ ನೆರವೇರಿತು.

Advertisement

ನಗರದ ಅರಮನೆ ಕೋಟೆ ಮಾರಮ್ಮ ದೇವಸ್ಥಾನದ ಆವರಣದಲ್ಲಿ ನಡೆದ ತಾಲೀಮಿನಲ್ಲಿ ಅಂಬಾರಿ ಆನೆ ಅಭಿಮನ್ಯು, ಕುಮ್ಕಿ ಆನೆಗಳಾದ ಕಾವೇರಿ, ಚೈತ್ರ, ಲಕ್ಷ್ಮೀ ಹಾಗೂ ಗೋಪಾಲಸ್ವಾಮಿ, ಅಶ್ವತ್ಥಾಮ, ಧನಂಜಯ ಸೇರಿದಂತೆ ಅಶ್ವಾರೋಹಿ ದಳದ 20 ಕ್ಕೂ ಕುದುರೆಗಳು ಭಾಗವಹಿಸಿದ್ದವು.

ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಡಿಸಿಪಿಗಳಾದ ಪ್ರದೀಪ್ ಗುಂಟಿ, ಗೀತಾ ಪ್ರಸನ್ನ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕರಿಕಾಳನ್, ಆನೆ ವೈದ್ಯ ಡಾ.ರಮೇಶ್ ಅವರ ಸಮ್ಮುಖದಲ್ಲಿ 7 ಫಿರಂಗಿಗಳಿಂದ ತಲಾ 3 ಸುತ್ತಿನಂತೆ ಒಟ್ಟು 21 ಸುತ್ತು ಕುಶಾಲ ತೋಪು ಸಿಡಿಸಲಾಯಿತು. ಈ ವೇಳೆ ಬೆದರದೆ ಇರಲಿ ಎಂಬ ಕಾರಣಕ್ಕೆ ಎಲ್ಲ ಆನೆಗಳ ಕಾಲುಗಳನ್ನು ಸರಪಳಿಯಿಂದ ಕಟ್ಟಲಾಗಿತ್ತು.

ಇದನ್ನೂ ಓದಿ:ಗೋಮಾಳಗಳ ರಕ್ಷಣೆ ಅತ್ಯಗತ್ಯ: ವಿಶ್ವಪ್ರಸನ್ನತೀರ್ಥ ಶ್ರೀಪಾದರು

ಮದವೇರಿದ ಹಿನ್ನಲೆ ವಿಕ್ರಮ ಆನೆಯನ್ನು ತಾಲೀಮಿನಿಂದ ದೂರು ಇರಿಸಲಾಗಿತ್ತು. ಗೋಪಾಲಸ್ವಾಮಿ ಮತ್ತು ಲಕ್ಷ್ಮೀ ಆನೆಗಳು ಕೊಂಚ ಬೆದರಿದವು. ಮೊದಲ ಬಾರಿಗೆ ಭಾಗವಹಿಸಿದ್ದ ಅಶ್ವತ್ಥಾಮ ಆನೆ ಉತ್ತಮವಾಗಿ ಸಹಕರಿಸಿತು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next