Advertisement

ಕುರುಗೋಡು: ಚರ್ಚೆಗೆ ಗ್ರಾಸವಾದ ದಮ್ಮೂರು ವಾರ್ಷಿಕ ಮಹಾಜನ ಸಭೆ

01:13 PM Dec 24, 2021 | Team Udayavani |

ಕುರುಗೋಡು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ರಸಗೊಬ್ಬರ ವಿತರಣೆ, ಬೆಳೆ ಸಾಲ ಮನ್ನಾ ಮತ್ತು ಸಂಘದ ಇತರೆ ಕಾರ್ಯ ಚಟುವಟಿಕೆಗಳಲ್ಲಿ ಬಹಳ ಲೋಪ ದೋಷ ಇದ್ದು, ಅವ್ಯವಹಾರ ನಡೆಯುತ್ತಿದೆ ಎಂದು ಗ್ರಾಮಸ್ಥರು ಸಂಘದ ಕಾರ್ಯನಿರ್ವಾಹಕ ರೇವಣ್ಣಸಿದ್ದಯ್ಯ ಅವರನ್ನು ತರಾಟೆಗೆ ತಗೆದುಕೊಂಡ ಪ್ರಸಂಗ ಜರುಗಿದೆ.

Advertisement

ತಾಲೂಕಿನ ದಮ್ಮೂರು ಗ್ರಾಮದ ಸಹಕಾರ ಸಂಘ ಹಮ್ಮಿಕೊಂಡಿದ್ದ 2020-21 ನೇ ಸಾಲಿನ ವಾರ್ಷಿಕ ಮಹಾ ಜನ ಸಭೆಯಲ್ಲಿ ಗ್ರಾಮಸ್ಥರು ತರಾಟೆಗೆ ತಗೆದುಕೊಂಡರು.

ಹಿಂದಿನ ಸರಕಾರ ಬೆಳೆ ಸಾಲ ಮನ್ನಾ ಮಾಡಿತ್ತು, ಅದರಲ್ಲಿ ಎಲ್ಲ ರೈತರಿಗೆ ಹಣ ತಲುಪಿದೆ ಆದರೆ ಇನ್ನೂ ಸುಮಾರು 6 ಜನ ರೈತರಿಗೆ ಮನ್ನಾ ಆಗಿಲ್ಲ. ಎಲ್ಲ ರೈತರ ಜೊತೆಗೆ ಬೇಕಾದ ದಾಖಲಾತಿಗಳನ್ನು ನೀಡಿದರು ಇನ್ನೂ ಬಂದಿಲ್ಲ ಕೇಳಿದರೆ ಆ ಸಮಸ್ಯೆ ಈ ಸಮಸ್ಯೆ ಅಂತ ಹೇಳುತ್ತಾರೆ. ಇದಲ್ಲದೆ ಇನ್ನೂ ಹಲವಾರು ರೈತರ ಸಾಲ ಮನ್ನಾ ಬಂದರೂ ದಾಖಲಾತಿಗಳು ಸರಿಯಿಲ್ಲ ಎಂದು ಬಂದಂತಹ ಹಣವನ್ನು ಸರಕಾರಕ್ಕೆ ವಾಪಸ್ಸು ಕಳುಹಿಸದೆ,ರೈತರಿಗೂ ಕೊಡದೆ ಸಂಘದ ನಿಧಿಯಲ್ಲಿ ಬಹಳ ದಿನಗಳಿಂದ ಇಟ್ಟಿದ್ದಾರೆ ಇದು ತಪ್ಪು ಎಂದು ಪ್ರಶ್ನೆ ಮಾಡಿದರು.

ಇನ್ನೂ ಸಂಘದಲ್ಲಿ ಯಾರಿಗೂ ಸೂಕ್ತ ದಾಖಲಾತಿಗಳು ಮತ್ತು ಹಣ ಪಡೆಯದೆ ವ್ಯವಹಾರ ಮಾಡುವಂತಿಲ್ಲ ಎಂಬ ಆದೇಶ ಇದ್ದರೂ ಕಳೆದ ಬಾರಿ ಆಡಳಿತ ಮಂಡಳಿಯವರಿಗೆ ಸುಮಾರು 5 ಜನರಿಗೆ ಹಣ ಪಡೆಯದೆ 5 ಲಕ್ಷ 70 ಸಾವಿರದಷ್ಟು ರಸಗೊಬ್ಬರ ವಿತರಣೆ ಮಾಡಿದ್ದಾರೆ. ಇಲ್ಲಿವರೆಗೂ ಆ ಹಣ ವಸೂಲಿ ಆಗಿಲ್ಲ. ಸಂಘದ ಪ್ರತಿಯೊಂದು ವ್ಯವಹಾರದ ಲೆಕ್ಕಾಚಾರ ಬುಕ್ ನಲ್ಲಿ ಎಂಟ್ರಿ ಇದೆ. ಆದರೆ 5ಲಕ್ಷ 70 ಸಾವಿರ ಮಾತ್ರ ಎಂಟ್ರಿ ಇಲ್ಲ ಇದರಿಂದ ರೈತರಿಗೆ ಬಹಳ ಮೋಸ ಮಾಡಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಂಘಕ್ಕೆ ಬರುವ ರಸಗೊಬ್ಬರ ಅಲ್ಲಲ್ಲಿ ಸಂಗ್ರಹಗೊಳ್ಳುತ್ತಿದೆ ಆದ್ದರಿಂದ ಸಂಘದ ಗೋದಾಮುನಲ್ಲಿ ಸಂಗ್ರಹಗೊಂಡು ಅಲ್ಲಿಂದಲೇ ರೈತರಿಗೆ ವಿತರಣೆ ಮಾಡಬೇಕು. ಇದರಿಂದ ಗ್ರಾಮಸ್ಥರಿಗೆ ಅನುಮಾನ ಕಾಡುತ್ತಿದೆ ಎಂದರು.

Advertisement

ಇದನ್ನೂ ಓದಿ:ತೆರೆಮರೆ ಕಸರತ್ತು: ವಿದೇಶ ಪ್ರವಾಸದ ವೇಳೆ ಸಿಎಂ ಬೊಮ್ಮಾಯಿ ಬದಲಾವಣೆ ಸಾಧ್ಯತೆ?!

ಇದಲ್ಲದೆ ಮುಖ್ಯ ಕಾರ್ಯನಿರ್ವಾಹಕರು ತಮ್ಮ ಸಂಬಳವನ್ನು ಸಂಘದ ನಿರ್ದೇಶಕರ ಗಮನಕ್ಕೆ ತರದೇ ಹೆಚ್ಚಳ ಮಾಡಿಕೊಳ್ಳುತ್ತಿದ್ದಾರೆ. ಏನಾದರು ಕೇಳಿದರೆ ಸರ್ಕಾರದ ಆದೇಶದಂತೆ ತೆಗೆದುಕೊಳ್ಳುತ್ತಿದ್ದೇನೆ ಎಂದು ಪ್ರತಿವಾದ ಮಂಡಿಸುತ್ತಾರೆ. ಸಂಘವು ಅವರಿಗೆ ಸೂಕ್ತವಾದ ಸಂಬಳ, ಮನೆ ಬಾಡಿಗೆ, ವೈದ್ಯಕೀಯ ವೆಚ್ಚ, ಸಾರಿಗೆ ವೆಚ್ಚ ನೀಡಿದರೂ, ಅದರ ಜೊತೆಗೆ ಬೋನಸ್ ಕೂಡ ತೆಗೆದುಕೊಳ್ಳುತ್ತಿದ್ದಾರೆ. ಇದು ಯಾವ ನ್ಯಾಯ ಆಕ್ರೋಶ ವ್ಯಕ್ತಪಡಿಸಿದರು.

ಸಂಘಕ್ಕೆ ಬರುವ ರೈತರಿಗೆ ಸರಿಯಾಗಿ ಸ್ವಂದಿಸುತ್ತಿಲ್ಲ, ಕೇಳಿದ ಮಾಹಿತಿಗೆ ಸರಿಯಾಗಿ ವಿವರಣೆ ನೀಡುವುದಿಲ್ಲ. ಏನಾದರೂ ಕೇಳಿದರೆ ಅದೆಲ್ಲ ನಿಮಗೆ ಯಾಕೆ ಬೇಕು ಅಂತ ರೈತರಿಗೆ ಧಮ್ಕಿ ಹಾಕುತ್ತಾರೆ ಎಂದು ಸಭೆಯಲ್ಲಿ ರೈತರು ತಮ್ಮ ಸಮಸ್ಯೆ ಮಂಡಿಸಿದರು.

ಬೆಳೆ ಸಾಲ ಮನ್ನಾ, ರಸಗೊಬ್ಬರ ವಿತರಣೆ, ಇತರೆ ವ್ಯವಹಾರ ಚಟುವಟಿಕೆಗಳಲ್ಲಿ ಕಂಡು ಬಂದ ಲೋಪ ದೋಷಗಳನ್ನು ಬಗೆಹರಿಸಲು ಸಂಘದ ಉಪ ಸಮಿತಿಯನ್ನು ರಚನೆ ಮಾಡಬೇಕು ಎಂದು ರೈತರು ಪಟ್ಟು ಹಿಡಿದರು.

ಆಹಾರ ಧಾನ್ಯವನ್ನು ವಿತರಣೆ ಮಾಡಲು ಸಂಘಕ್ಕೆ ಒಳಪಡಿಸಿರುವುದರಿಂದ ಕಾರ್ಡ್ ದಾರರಿಗೆ ಕೂಡ ಸರಿಯಾದ ರೀತಿಯಲ್ಲಿ ಆಹಾರ ಧಾನ್ಯಗಳನ್ನು ವಿತರಣೆ ಮಾಡುತ್ತಿಲ್ಲ. ಅದರಲ್ಲಿ ಕಾರ್ಯನಿರ್ವಹಿಸುವವರು ಕೂಡ ಸರಿಯಾಗಿ ಇರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next