ಚನ್ನರಾಯಪಟ್ಟಣ/ಶ್ರವಣಬೆಳಗೊಳ: ಭಾರತೀಯ ಸಂಸ್ಕೃತಿ ಹಾಗೂ ಕುರುಕ್ಷೇತ್ರ ನಾಟಕವನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎ.ಎನ್.ಪ್ರಕಾಶಗೌಡ ತಿಳಿಸಿದರು.
ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗ ಶ್ರವವಣಗೆಳಗೊಳ ಪೊಲೀಸ್ ಠಾಣೆ ಅಧಿಕಾರಿ ಹಾಗೂ ಸಿಬ್ಬಂದಿ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಧರ್ಮರಾಯನ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.
ದಶಕಗಳ ಹಿಂದೆ ಗ್ರಾಮೀಣ ಭಾಗದಲ್ಲಿ ಕಲೆಗೆ ಹೆಚ್ಚು ಮಹತ್ವ ನೀಡಲಾಗುತ್ತಿತ್ತು. ಪ್ರತಿ ಗ್ರಾಮದಲ್ಲಿ ಮಹಾಭಾರತ, ರಾಮಾಯಣ, ಕುರುಕ್ಷೇತ್ರದಂತಹ ನಾಟಕ ಪ್ರದರ್ಶನ ಮಾಡುವ ಮೂಲಕ ಸಮಾಜಕ್ಕೆ ಆದರ್ಶ ಪುರುಷರ ಮಹತ್ವ ತಿಳಿಸುವುದಲ್ಲದೆ ಕಲೆಯನ್ನು ಪೋಷಣೆ ಮಾಡುತ್ತಿದ್ದರು ಆದರೆ ಇಂದು ಮಾಧ್ಯಮಗಳಿಗೆ ಜೋತು ಬಿದ್ದಿರುವುದರಿಂದ ಕಲೆ ನಶಿಸುತ್ತಿದೆ ಎಂದು ವಿಷಾದಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಎನ್.ಪುಟ್ಟಸ್ವಾಮಿಗೌಡ ಮಾತನಾಡಿ, ಬೇಸಿಗೆ ಸಮಯದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಪೌರಾಣಿಕ ನಾಟಕಗಳ ಹಬ್ಬ ಕಲಾಪ್ರಿಯರಿಗೆ ರಸದೌತಣ ಆದರೆ ಇಂದು ಗ್ರಾಮೀಣರು ಪಟ್ಟಣಕ್ಕೆ ಆಗಮಿಸಿ ಸಿನಿಮಾ ಮಂದಿರಕ್ಕೆ ತೆರಳು ಮನರಂಜನೆ ಪಡೆಯುತ್ತಿದ್ದಾರೆ.ನಾಟಕಗಳ ಪ್ರದರ್ಶ ಆಗುವುದಿರಂದ ಸುಂದರ ವಾತಾವರಣ ನಿರ್ಮಾಣ ಆಗುತ್ತದೆ ಎಂದು ಹೇಳಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ನಂದಿನಿ, ಡಿವೈಎಸ್‌ಪಿ ಲಕ್ಷ್ಮೇಗೌಡ, ಯುವರಾಜ, ವೃತ್ತ ನಿರೀಕ್ಷಕ ಕಾಂತರಾಜು, ಠಾಣೆ ಎಸ್‌ಐ ಕೃಷ್ಣಶೆಟ್ಟಿ, ಕಸಾಪ ಮಾಜಿ ಅಧ್ಯಕ್ಷ ಲೋಕೇಶ್, ಟಿಎಪಿಎಂಎಸ್ ನಿರ್ದೇಶಕ ಕೃಷ್ಣೇಗೌಡ, ಗ್ರಾಪಂ ಅಧ್ಯಕ್ಷೆ ಲತಾ, ಶ್ರೀಧರ್, ಶಿಲ್ಪಾ, ಕೃಷ್ಣಮೂರ್ತಿ, ರವಿ ಮೊದಲಾದವರಿದ್ದರು.