ಕುರುಗೋಡು: ಸಮೀಪದ ಕುಡಿತಿನಿ ಭಾಗದಲ್ಲಿ ಭೂಮಿ ಕಳೆದುಕೊಂಡ ರೈತರು ಹಾಗೂ ಕಾರ್ಮಿಕರು ಮತ್ತು ಸಿಪಿಐಎಂ ಸೇರಿ ವಿವಿಧ ಕನ್ನಡ ಪರ ಸಂಘಟನೆಗಳು 24 ನೇ ದಿನದ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಸರಕಾರದ ವಿರುದ್ದ ಆಕ್ರೋಶ ಹೊರ ಹಾಕಿದರು.
ಪ್ರತಿಭಟನೆಯಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸಂಪತ್ ಕುಮಾರ್ ಮಾತನಾಡಿ, ಸುಮಾರು 24 ದಿನಗಳಿಂದ ಪ್ರತಿಭಟನೆ ನಡೆಸುತಿದ್ದರು, ಸರಕಾರ ಆಗಲಿ ಅಥವಾ ಕಾರ್ಖಾನೆಗಳ ಮಾಲೀಕರು ಆಗಲಿ ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿ ನಿರ್ಣಯ ಕೈಗೊಳ್ಳಲು ಮುಂದಾಗದೆ ಮೌನವಹಿಸಿರುವುದು ಸಮಂಜಸವಲ್ಲ ಎಂದು ಎಚ್ಚರಿಕೆ ನೀಡಿದರು.
ಇದರ ಬಗ್ಗೆ ಮುಂದಿನ ದಿನದಲ್ಲಿ ಕೂಡಲೇ ಹೋರಾಟಕ್ಕೆ ಸಹಕಾರ ನೀಡಿ ಬೇಡಿಕೆಗಳನ್ನು ಈಡೇರಿಸಲು ಮುಂದಾಗದೆ ಮತ್ತು ರೈತರಿಗೆ ನ್ಯಾಯ ಸಿಗದಿದ್ದಲ್ಲಿ ಎನ್.ಎಚ್.63 ರ ಹೆದ್ದಾರಿಯನ್ನು ಸಂಪೂರ್ಣವಾಗಿ ಒಂದು ದಿನ ಬಂದ್ ಮಾಡಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದರ ಬಗ್ಗೆ ಸಂಸದರು, ಸಚಿವರು ಗಮನ ಹರಿಸದೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗ್ಗೆ ತಿಳಿದುಕೊಳ್ಳೋದೇ ಇದಕ್ಕೆ ಬೆಂಬಲ ಸೂಚಿಸದೆ ಇರುವುದು ದುರಂತದ ಸಂಗತೀಯಾಗಿದೆ ಎಂದು ಬೇಸಾರ ವ್ಯಕ್ತಪಡಿಸಿದರು.
Related Articles
ಆದ್ದರಿಂದ ಮುಂದಿನ ದಿನದಲ್ಲಿ ಎನ್. ಹೆಚ್. 63 ಹೆದ್ದಾರಿ ಒಂದು ದಿನ ಪೂರ್ತಿ ಸಂಪೂರ್ಣ ಬಂದ್ ಮಾಡಲು ಎಲ್ಲ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.
ಇದಲ್ಲದೆ ಮುಂದೆ ಬರುವಂತಹ ವಿಧಾನಸಭಾ ಚುನಾವಣೆಯನ್ನು ಕುಡುತಿನಿ. ಜಾನೆ ಕುಂಟೆ. ಹರಗಿನ ದೋಣಿ. ವೇಣಿ ವೀರಾಪುರ. ಹಾಗೂ ಕೊಳಗಲ್ ಗ್ರಾಮಗಳ ಎಲ್ಲರೂ ಚುನಾವಣೆ ಬಹಿಷ್ಕಾರ ಮಾಡಲಾಗುವುದು ಎಂದು ಎಲ್ಲಾ ಹೋರಾಟಗಾರರು ತಿಳಿಸಿದರು.
ಈ ಸಂದರ್ಭದಲ್ಲಿ ಸತ್ಯ ಬಾಬು, ತಿಪ್ಪೇಸ್ವಾಮಿ,ಜಗ್ಲಿ ಸಾಬ್, ಭಾವಿ ಶಿವಕುಮಾರ್, ಬಿ.ಆರ್. ವೆಂಕಟೇಶ್, ಕೃಷ್ಣಮೂರ್ತಿ, ಕನಕಪ್ಪ, ಗೋಪಾಲ, ಹುಲಿಗಮ್ಮ, ತಮ್ಮನಗೌಡ, ತಿಮ್ಮಪ್ಪ ಸೇರಿ ಇತರರು ಇದ್ದರು.
ಇದನ್ನೂ ಓದಿ: ನಗರಸಭೆ ಮಾಜಿ ಅಧ್ಯಕ್ಷೆ ಹುಲಿಗೆಮ್ಮ ಕಾಮದೊಡ್ಡಿ ಮನೆಗೆ ಜನಾರ್ದನರೆಡ್ಡಿ ಭೇಟಿ… ಪಕ್ಷ ಸೇರ್ಪಡೆ