Advertisement

ಕುರುಗೋಡು: ಮಂಗನ ಕಡಿತಕ್ಕೆ ಗಂಭೀರ ಗಾಯಗೊಂಡ ಸಾರ್ವಜನಿಕರು, ವಿದ್ಯಾರ್ಥಿಗಳು

12:43 PM Nov 25, 2022 | Team Udayavani |

ಕುರುಗೋಡು: ಯಾರಾದ್ರೂ ಕಿರಿಕ್ ಮಾಡಿಕೊಂಡಿದ್ದಾರೊ ಗೊತ್ತಿಲ್ಲ. ಆದರೂ ಪಟ್ಟಣ ಸಮೀಪದ ಎಂ. ಸೂಗೂರು ಗ್ರಾಮದಲ್ಲಿ ಕಳೆದ ವಾರದಿಂದ ಮಂಗ ರೊಚ್ಚಿಗೆದ್ದು ವೃದ್ಧರನ್ನು, ಶಾಲಾ ವಿದ್ಯಾರ್ಥಿಗಳನ್ನು ಹಾಗೂ ಕಿರಾಣಿ ಅಂಗಡಿ ಮಾಲೀಕರ ನಿದ್ದೆಗೆಡಿಸಿ ತುಂಬಾ ತೊಂದರೆ ಕೊಡುವುದಲ್ಲದೆ ಜನರ ತಲೆ, ಕೈಗೆ, ಕುತಿಯ ಭಾಗಕ್ಕೆ ಎಲ್ಲಂದರಲ್ಲಿ ದೊಡ್ಡ ಗಾತ್ರದಲ್ಲಿ ಕಚ್ಚಿ ಗಂಭೀರ ಗಾಯಗಳನ್ನು ಮಾಡಿದೆ.

Advertisement

ಸೂಗೂರು, ದೊಡ್ಡರಾಜ ಕ್ಯಾಂಪ್, ಇಟಗಿ, ವಿರಾಪುರ ಗ್ರಾಮದ ವಿದ್ಯಾರ್ಥಿಗಳು, ವೃದ್ಧರು ಸೇರಿದಂತೆ ಸುಮಾರು 40 ಕ್ಕೂ ಹೆಚ್ಚು ಜನರು ಕಡಿತದ ಒಳಗಾಗಿದ್ದಾರೆ. ದೊಡ್ಡರಾಜ ಕ್ಯಾಂಪ್ ನ ವೃದ್ಧ ಒಬ್ಬರಿಗೆ ತೆಲೆ ಭಾಗದಲ್ಲಿ ಸಿಕ್ಕಾಪಟ್ಟೆ ಕಚ್ಚಿದ್ದು, ಗಂಭೀರ ಗಾಯಗೊಂಡ ಅವರ ತಲೆಗೆ 8 ರಿಂದ 10 ಹೊಲಿಗೆಗಳನ್ನು ಹಾಕಲಾಗಿದೆ. ಎಂ. ಸೂಗೂರು ಶಾಲೆಯ ಅನೇಕ ವಿದ್ಯಾರ್ಥಿಗಳ ಕೈಗೆ ಕಚ್ಚಿ ಗಂಭೀರ ಗಾಯ ಮಾಡಿದೆ. ಅದಲ್ಲದೇ ಗ್ರಾಮದ ಕಿರಾಣಿ ಅಂಗಡಿಗಳಿಗೆ ನುಗ್ಗಿ ಅನೇಕ ತಿಂಡಿ-ತಿನಿಸುಗಳನ್ನು ಚೆಲ್ಲಾ-ಪಿಲ್ಲಿ ಮಾಡಿ ಹದಗೆಡಿಸುತ್ತಿದೆ. ಇದರಿಂದ ಗ್ರಾಮದ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

ಸುಮಾರು 3-4 ದಿನಗಳಿಂದ ಗ್ರಾಪಂ, ಕಂದಾಯ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿಗಳು ಮಂಗನನ್ನು ಬೋನಿಗೆ ಹಾಕಲು ಹರಸಾಹಸ ಪಡುತಿದ್ದು, ಬೋನಿಗೆ ಬೀಳದೆ ಅವರ ಕೈಗೂ ಸಿಗದೇ ತಪ್ಪಿಸಿಕೊಂಡು ಗ್ರಾಮದಲ್ಲಿ ಓಡಾಡುತ್ತಿದೆ. ಇಂದು ಕೂಡ ಮಂಗನನ್ನು ಹಿಡಿಯುವ ಕಾರ್ಯಾಚರಣೆ ಬಿರುಸಿನಿಂದ ನಡೆಯುತ್ತಿದೆ. ಅಧಿಕಾರಿಗಳು ಮಾತ್ರವಲ್ಲದೇ ಸಾರ್ವಜನಿಕರು ಕೂಡ ತಿಂಡಿ ತಿನಿಸುಗಳಲ್ಲಿ ನಿದ್ರೆ ಮಾತ್ರೆ ಹಾಕಿ ಅದನ್ನು ಹಿಡಿಯುವ ಪ್ರಯತ್ನ ಮಾಡಿದರೂ ಪ್ರಯೋಜನವಾಗದೆ ಚಾಣಕ್ಷತನ ಮೆರೆಯುತ್ತಿದೆ. ಮಂಗನಿಂದಾಗಿ ಗ್ರಾಮದ ಸಾರ್ವಜನಿಕರಿಗೆ ಮತ್ತು ಅಧಿಕಾರಿಗಳಿಗೆ ತೆಲೆ ನೋವಾಗಿ ಕಾಡುತ್ತಿದೆ.

ಇದರಿಂದ ಗ್ರಾಮದ ರಸ್ತೆಯಲ್ಲಿ ಜನರು ಓಡಾಡುವುದು ಕಷ್ಟಕರವಾಗಿದೆ. ಇನ್ನೂ ಒಬ್ಬ ವಿದ್ಯಾರ್ಥಿಗೆ ಗಂಭೀರವಾಗಿ ಕಚ್ಚಿದ್ದು ಬಳ್ಳಾರಿ ವಿಮ್ಸ್ ನಲ್ಲಿ ಚಿಕಿತ್ಸೆ ಪಡೆದು ಬಂದಿದ್ದಾನೆ. ವಿದ್ಯಾರ್ಥಿಗಳು ಕೂಡ ಶಾಲೆಗೆ ಬರುವುದಕ್ಕೆ ಭಯ ಪಡುತ್ತಿದ್ದಾರೆ.

ಗ್ರಾ.ಪಂ. ಇಲಾಖೆ ಸಿಬ್ಬಂದಿಗಳು ಮಂಗನನ್ನು ಈ ಗ್ರಾಮದಿಂದ ಬೇರೆ ಬೇರೆ ಗ್ರಾಮಗಳಿಗೆ ಬಿಟ್ಟು ಬಂದರೂ ಕೂಡಾ ಅದು ಮತ್ತೆ ಮರಳಿ ಸೂಗೂರು ಗ್ರಾಮಕ್ಕೆ ಬಂದಿದೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಕಂಠಕವಾಗಿರುವ ಈ ಮಂಗನನ್ನು ಅಧಿಕಾರಿಗಳು ಯಾವ ರೀತಿಯಲ್ಲಿ ಸೆರೆ ಹಿಡಿದು ಜನರ ನೆಮ್ಮದಿಯನ್ನು ಕಾಪಾಡುತ್ತಾರೋ ಕಾದು ನೋಡಬೇಕು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next