ಕುರುಗೋಡು: ಪಟ್ಟಣದಿಂದ ಗೆಣಿಕೆಹಾಳ್ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿನ ಎಲ್.ಎಲ್.ಸಿ ಕಾಲುವೆಯ ಸೇತುವೆ ಕುಸಿಯುವ ಹಂತದಲ್ಲಿದ್ದು, ವಾಹನ ಸಂಚಾರಿಗಳಿಗೆ ಆತಂಕ ಉಂಟಾಗಿದೆ. ಕುಸಿದ ಬೀಳುವ ಸ್ಥಿತಿ: ಬಸವಪುರ ಹಾಗೂ ಗೆಣಿಕೆಹಾಳ್ ಗ್ರಾಮದ ನಡುವೆ ಇರುವ 56 ಕಿಮೀ ಎಲ್‌ಎಲ್‌ಸಿ ಕಾಲುವೆ ಮಧ್ಯೆ ಹಾದು ಹೋಗಿರುವ ರಸ್ತೆ, 1952ರಲ್ಲಿ ನಿರ್ಮಿಸಿದ ಸೇತುವೆ ಎರಡೂ ಕಡೆ ಕುಸಿದಿದೆ.
Advertisement
ದೊಡ್ಡದಾದ ತಗ್ಗುಗಳು ಬಿದ್ದಿದ್ದು, ಕಬ್ಬಿಣದ ಕಂಬಿಗಳು ಮುರಿದು ಬಿದ್ದಿವೆ. ಈ ಸೇತುವೆ ಮೇಲೆ ಹೆಚ್ಚಿನ ವಾಹನಗಳ ಸಂಚಾರ ಇದ್ದು, ಸಂಚಾರದ ಹೊಡೆತಕ್ಕೆ ಸೇತುವೆ ಕಟ್ಟಡದ ಕಲ್ಲುಗಳು ಶಿಥಿಲಗೊಂಡು ಕುಸಿದು ಬೀಳುವ ಹಂತಕ್ಕೆ ತಲುಪಿದೆ.
Related Articles
Advertisement
ನಿರ್ಲಕ್ಷ್ಯ : ಸೇತುವೆ ನಿರ್ಮಾಣಗೊಂಡು 67 ವರ್ಷ ಕಳೆದು, ಕುಸಿದು ಬೀಳುವ ಹಂತಕ್ಕೆ ತಲುಪಿದರು ದುರಸ್ತಿ ಕಾರ್ಯ ನಡೆಯುತ್ತಿಲ್ಲ, ಗೆಣಿಕೆಹಾಳ್ ಗ್ರಾಮಸ್ಥರು ಅನೇಕ ಬಾರಿ ಲೋಕೋಪಯೋಗಿ ಇಲಾಖೆ, ಜಿಲ್ಲಾಡಳಿತ ಹಾಗೂ ತುಂಗಭದ್ರಾ ಬೋರ್ಡ್ ಗಮನಕ್ಕೆ ತಂದರೂ ನಮಗೆ ಸಂಬಂದವಿಲ್ಲ ಎಂಬಂತೆ ಯಾವ ಅಧಿಕಾರಿಗಳು ತಲೆಕೆಡಿಸಿಕೊಳ್ಳದೇ ಒಂದು ಇಲಾಖೆಯ ಮೇಲೆ ಇನ್ನೊಂದು ಇಲಾಖೆ ಮೇಲೆ ನೇಪ ಹೇಳಿಕೊಂಡು ಕಾಲ ಕಳೆಯುತ್ತಾರೆ. ಆದರೆ ಇಂದಿಗೂ ದುರಸ್ತಿ ಮಾತ್ರ ಕಾಣುತ್ತಿಲ್ಲ.
ಅಪಾಯದ ಅಂಚಿನಲ್ಲಿರುವ ಸೇತುವೆಯನ್ನು ತಕ್ಷಣವೇ ದುರಸ್ತಿಗೊಳಿಸಬೇಕು. ಇದಕ್ಕೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಹೋರಾಟ ಕೈಗೊಳ್ಳಬೇಕಾಗುತ್ತಾದೆ ಎಂದು ಗೇಣಿಕೆಹಾಳ್, ಹೊಸಗೆಣಿಕೆಹಾಳ್ ಗ್ರಾಮದ ಮುಖಂಡರು ಒತ್ತಾಯಿಸಿದ್ದಾರೆ.