ಕುರುಗೋಡು: ಸಮೀಪದ ದಮ್ಮೂರು ಗ್ರಾ.ಪಂ. ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷರ ಚುನಾವಣೆ ಶಾಂತಿಯುತವಾಗಿ ಜರುಗಿತು.
ಪ್ರಾರಂಭದಲ್ಲಿ ಗ್ರಾ.ಪಂ. ಅಧ್ಯಕ್ಷ ಸ್ಥಾನಕ್ಕೆ ಬಿ. ನಾಗವೇಣಿ ದೇವರೆಡ್ಡಿಯವರು ನಾಮಪತ್ರ ಸಲ್ಲಿಸಿದರು. ಅವರ ವಿರುದ್ಧ ಅಧ್ಯಕ್ಷ ಸ್ಥಾನಕ್ಕೆ ಯಾರು ಕೂಡಾ ನಾಮಪತ್ರ ಸಲ್ಲಿಸದ ಕಾರಣ ಚುನಾವಣೆ ಅಧಿಕಾರಿ ವಿ. ನಿರ್ಮಲ, ನಾಗವೇಣಿ ಬಿ. ದೇವರೆಡ್ಡಿಯನ್ನು ದಮ್ಮೂರು ಗ್ರಾ.ಪಂ. ನೂತನ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ ಎಂದು ಘೋಷಿಸಿದರು.
ಇದೆ ವೇಳೆ ನೂತನ ಅಧ್ಯಕ್ಷೆ ಬಿ. ನಾಗವೇಣಿ ಮಾತನಾಡಿ, ಗ್ರಾ.ಪಂ. ಸದಸ್ಯರನ್ನು ವಿಸ್ವಾಸಕ್ಕೆ ತೆಗೆದುಕೊಂಡು ಗ್ರಾಮದ ಅಭಿವೃದ್ಧಿಗೆ ಶ್ರಮಿಸಲಾಗುವುದು. ಇದಕ್ಕೆ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಲಕ್ಷ್ಮಿ ಮಂಜುನಾಥ, ಸದಸ್ಯರಾದ ಪಾರ್ವತಿ, ಹೆಚ್. ಗೋವರ್ಧನ ರೆಡ್ಡಿ, ಸಿ. ಹರಿಚಂದ್ರ ರೆಡ್ಡಿ, ಡಿ. ದೇವಣ್ಣ, ಬಸವರಾಜ್, ಪಿ. ಜಯಮ್ಮ ಗಿರೀರೆಡ್ಡಿ, ಗಂಗಮ್ಮ, ಹೊನ್ನಪ್ಪ, ಜಾಯಿ ಪ್ರಕಾಶ್ ರೆಡ್ಡಿ, ಮಾಳಮ್ಮ, ಲಕ್ಷ್ಮಿ ದೇವಿ, ಗೋಪಲರಾವ್, ಪಿಡಿಒ ಮಲ್ಲಿಕಾರ್ಜುನ, ಸಿಬ್ಬಂದಿ ವರ್ಗ ಸೇರಿದಂತೆ ಇತರರು ಇದ್ದರು.
Related Articles
ನೂತನ ಗ್ರಾ.ಪಂ. ಅಧ್ಯಕ್ಷೆಯನ್ನು ಸದಸ್ಯರು, ಗ್ರಾಮದ ಮುಖಂಡರು ಸನ್ಮಾನಿಸಿ, ಗೌರವಿಸಿದರು.