Advertisement

ಕುರುಗೋಡಲ್ಲಿ ಕೋವಿಡ್ ಪ್ರಕರಣ ಪತ್ತೆ: ಆತಂಕ

06:45 PM Jul 02, 2020 | Naveen |

ಕುರುಗೋಡು: ಪಟ್ಟಣದ 7ನೇ ವಾರ್ಡಿನ ನಿವಾಸಿ 56 ವರ್ಷದ ಮಹಿಳೆಗೆ ಕೋವಿಡ್ ಸೋಂಕು ಮಂಗಳವಾರ ದೃಢಪಟ್ಟಿದೆ. ಪಟ್ಟಣದಲ್ಲಿ ಮೊದಲನೇ ಪ್ರಕರಣ ದೃಢವಾಗಿರುವುದರಿಂದ ಕುರುಗೋಡಿನ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಈ ಮಹಿಳೆ ಅನಾರೋಗ್ಯದಿಂದ ಬಳಲುತ್ತಿದ್ದು, ನಾಲ್ಕು ದಿನದ ಹಿಂದೆ ಚಿಕಿತ್ಸೆ ಪಡೆಯಲು ಬಳ್ಳಾರಿ ಆಸ್ಪತ್ರೆಗೆ ದಾಖಾಲಾಗಿದ್ದಳು. ಅಲ್ಲಿ ಕೋವಿಡ್‌ ಪರೀಕ್ಷೆ ಮಾಡಲಾಗಿದ್ದು ಪಾಸಿಟಿವ್‌ ಇರುವುದು ಕಂಡುಬಂದಿದೆ.

Advertisement

ಕೋವಿಡ್ ಸೋಂಕಿತ ಮಹಿಳೆಯನ್ನು ಪಟ್ಟಣದ ಬಸ್‌ ಡಿಪೋದ ಹಿಂದುಗಡೆಯಿರುವ ಮನೆಯಿಂದ ಬಳ್ಳಾರಿ ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ಆಂಬ್ಯುಲೆನ್ಸ್‌ ಮೂಲಕ ಸ್ಥಳಾಂತರಿಸಲಾಯಿತು. ಸೋಂಕಿತ ಮಹಿಳೆಯ ಮನೆಯಲ್ಲಿರುವ 10 ಜನರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ತಾಲೂಕು ಆಡಳಿತ 7ನೇ ವಾರ್ಡ್‌ನನ್ನು ಕಂಟೈನ್ಮೆಂಟ್‌ ಪ್ರದೇಶವನ್ನಾಗಿಸಿ ಬ್ಯಾರಿಕೇಡ್‌ ಅಳವಡಿಸಿ ಸ್ಯಾನಿಟೈಸರ್‌ ಸಿಂಪಡಣೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಗ್ರೇಡ್‌ 1 ತಹಶೀಲ್ದಾರ್‌ ಕೆ.ರಾಘವೇಂದ್ರ ರಾವ್‌, ಗ್ರೇಡ್‌ 2 ತಹಶೀಲ್ದಾರ್‌ ಮಲ್ಲೇಶಪ್ಪ, ಹಿರಿಯ ಆರೋಗ್ಯ ಸಹಾಯಕ ಕೆ. ಮಂಜುನಾಥ, ಕಂದಾಯ ನಿರೀಕ್ಷಕ ಬಸಲಿಂಗಪ್ಪ, ಆರ್‌.ಆರ್‌.ಟಿ ತಂಡ ಆರೋಗ್ಯ ಸಿಬ್ಬಂದಿ, ಪೊಲೀಸ್‌ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next