ಕುರುಗೋಡು : ಗ್ರಾಮೀಣ ಭಾಗದದಿಂದ ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ಸೌಕರ್ಯ ಕಲ್ಪಿಸಬೇಕು ಎಂದು ಅಗ್ರಹಿಸಿ ಸಿರಿಗೇರಿ ಗ್ರಾಮದ ನಿರಂತರ ಯುವ ಕ್ರೀಡಾ ಸಂಘ, ವಿಶ್ವಜ್ಞಾನಿ ಸಾಂಸ್ಕೃತಿಕ ಅಭಿವೃದ್ಧಿ ಯುವಕ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ವಿನಾಯಕ ಯುವಕ ಸಂಘದ ಪದಾಧಿಕಾರಿಗಳು ಕುರುಗೋಡು ಬಸ್ ಘಟಕದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ಸಮೀಪದ ಚನ್ನಪಟ್ಟಣ, ಹಾವಿನಹಾಳ್, ಮುದ್ದಟನೂರು, ಮಾಳಪುರ ಗ್ರಾಮಗಳಿಂದ ನಿತ್ಯ ಬಳ್ಳಾರಿ ಹಾಗೂ ಸಿರುಗುಪ್ಪ ಪಟ್ಟಣಗಳಿಗೆ ಕಾಲೇಜ್ ಗೆ ತೆರಳುವ ಸುಮಾರು ವಿದ್ಯಾರ್ಥಿಗಳು ಸಿರಿಗೇರಿ ಮಾರ್ಗ ಪ್ರಯಾಣ ಬೆಳಸುತ್ತಾರೆ. ಇದಲ್ಲದೆ ಸಿರಿಗೇರಿ ಗ್ರಾಮ ದೊಡ್ಡ ಪಟ್ಟಣವಾಗಿದ್ದರಿಂದ ಇಲ್ಲಿಯಿಂದ ಸುಮಾರು 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿರುಗುಪ್ಪ ಮತ್ತು ಬಳ್ಳಾರಿ ಗೆ ಕಾಲೇಜ್ ವಿದ್ಯಾಭ್ಯಾಸ ಕ್ಕೆ ಹೋಗುತ್ತಿದ್ದಾರೆ. ಈ ವಿದ್ಯಾರ್ಥಿಗಳು ಪ್ರಯಾಣಿಸುವ ಬಸ್ ಗಳು ದಾಸಪುರ, ಕೊಂಚಿಗೇರಿ ಮಾರ್ಗವಾಗಿ ಚಲಾಯಿಸುತ್ತಿದ್ದು, ಆ ಗ್ರಾಮದ ಕಾಲೇಜ್ ಗೆ ಹೋಗುವ ವಿದ್ಯಾರ್ಥಿಗಳು ಸರಿ ಸುಮಾರು 100 ಕ್ಕೂ ಹೆಚ್ಚು ಅದೆ ಬಸ್ ನಲ್ಲಿ ಪ್ರಯಾಣಿಸುತ್ತಿರುವುದರಿಂದ ತುಂಬಾ ತೊಂದ್ರೆ ಅನುಭವಿಸುತ್ತಿದ್ದಾರೆ. ಇನ್ನೂ ಈ ನಾಲ್ಕು, ಐದು ಗ್ರಾಮಗಳ 250 ಕ್ಕೂ ಹೆಚ್ಚು ಮಕ್ಕಳು 2 ಬಸ್ ಗೆ ಮಾತ್ರ ಅವಲಂಬಿತಾರಾಗಿದ್ದಾರೆ. ಇದರಿಂದ ನಿತ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ. ಅಲ್ಲದೆ ಬಸ್ ನಲ್ಲಿ ಪ್ರಯಾಣಿಸುವ ವಿವಿಧ ಗ್ರಾಮಗಳ ವಿದ್ಯಾರ್ಥಿಗಳ ಮದ್ಯೆ ಮಾತಿನ ಚಕ ಮಾಕಿ ಕೂಡ ನಡೆದು ಹೋಗಿವೆ. ಈ ವಿಷಯ ಗ್ರಾಮದ ಮುಖಂಡರ ಗಮನಕ್ಕೆ ಹಾಗೂ ಸಂಘ ಸಂಸ್ಥೆಯ ವರ ಗಮನಕ್ಕೆ ಹೋಗಿರುವುದರಿಂದ ವಿದ್ಯಾರ್ಥಿಗಳ ಸರಿಯಾದ ಸಮಯಕ್ಕೆ ಮತ್ತು ಅಗತ್ಯಕ್ಕೆ ತಕ್ಕಂತೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಅಗ್ರಹಿಸಿದರು.
ಇದೆ ತಿಂಗಳು 15 ರ ಒಳಗೆ ಬಸ್ ವ್ಯವಸ್ಥೆ ಅನುಕೂಲ ಮಾಡದಿದ್ದಲಿ ವಿವಿಧ ಸಂಘಟನೆ ಗಳ ಸಮ್ಮುಖದಲ್ಲಿ ಸಿರಿಗೇರಿ ಯ ಮುಖ್ಯ ರಸ್ತೆ ಬಂದ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಿತ್ಯ ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಬಸ್ ಸೌಲಭ್ಯ ಇಲ್ಲದೇ ಇರುವುದರಿಂದ ದಿನನಿತ್ಯ ಖಾಸಗಿ ವಾಹನ ಗಳ ಮೂಲಕ ಪ್ರಯಾಣ ಬೆಳಸುವ ಅನಿವಾರ್ಯತೆ ಕೂಡ ನಿರ್ಮಾಣಗಿದೆ.
Related Articles
ಈ ಕುರಿತು ಸಿರಿಗೇರಿ ಗ್ರಾಪಂ ಪಿಡಿಓ ಮತ್ತು ಬಳ್ಳಾರಿ ಕೆ ಎಸ್ ಆರ್ ಟಿಸಿ ಬಸ್ ಜಿಲ್ಲಾ ಘಟಕದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಶ್ವ ಜ್ಞಾನಿ ಶೈಕ್ಷಣಿಕ ಸಾಂಸ್ಕೃತಿಕ ಅಭಿವೃದ್ಧಿ ಯುವಕ ಸಂಘದ ಅಧ್ಯಕ್ಷ ಲಕ್ಷ್ಮಣ ಭಂಡಾರಿ, ನಿರಂತರ ಯುವ ಕ್ರೀಡಾ ಸಂಘದ ಅಧ್ಯಕ್ಷ ಸದ್ದಾಂ ಹುಸೇನ್ ,ವಿನಾಯಕ ಯುವಕರ ಸಂಘದ ಅಧ್ಯಕ್ಷ ಬಿ ಸುರೇಶ್, ಹನುಮಂತ, ಚಾಂದ್ ಬಾಷಾ ಸೇರಿದಂತೆ ಇತರರು ಇದ್ದರು.