ಕುರುಗೋಡು : ಪಟ್ಟಣದ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ 70 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡಿಯುತ್ತಿದ್ದಾರೆ. ಆದ್ರೆ ನಿಲಯದಲ್ಲಿ ಸುಮಾರು ವರ್ಷಗಳಿಂದ ಸರಿಯಾಗಿ ಸೌಲಭ್ಯಗಳು ಸಿಗದೆ ಸಮಸ್ಯೆಗಳು ಎದುರಿಸುವ ಅನಿವಾರ್ಯತೆ ನಿರ್ಮಾಣವಾಗಿದೆ.
ನಿಲಯದಲ್ಲಿ, ಕೊಠಡಿಗಳ ಶಿಥಿಲಾ, ಸೌಚಾಲಯ, ಬೆಡ್, ಶುದ್ಧ ನೀರು, ಬೋರ್ಡ್, ವಿದ್ಯುತ್ ಸಮಸ್ಯೆಗಳು ಸೇರಿದಂತೆ ವಿದ್ಯಾರ್ಥಿಗಳು ನಿತ್ಯ ಸೇವಿಸುವ ಉಪಹಾರದ ಕೆಲ ಸಮಸ್ಯೆಗಳು ಎದುರಾಗಿದ್ದು, ಈ ವಿಷಯ ಕುರಿತು ತಹಸೀಲ್ದಾರ್ ಗಮನಕ್ಕೆ ಬಂದ ನಂತರ ದಿಡೀರ್ ನೇ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಮಸ್ಯೆ ಗಳನ್ನು ಸಂಗ್ರಹಿಸಿಕೊಂಡು ಮೇಲ್ವಿಚಾರಕರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಜರುಗಿದೆ.
ತಹಸೀಲ್ದಾರ್ ರಾಘವೇಂದ್ರ ರಾವ್ ಮುಂದೆ ವಿದ್ಯಾರ್ಥಿಗಳು ಸಮಸ್ಯೆ ಕುರಿತು ಮಾತನಾಡಿ, ಕೊಠಡಿಗಳಲ್ಲಿ ರಾತ್ರಿ ಮಲಗಲು ತುಂಬಾ ಭಯ ವಾಗುತ್ತಿದೆ. ಎಲ್ಲಂದರಲ್ಲಿ ಶಿಥಿಲಾಗೊಂಡು ಕಾಂಕ್ರಿಟ್ ಪದರು ಚೂರು ಚುರಾಗಿ ಬೀಳುತ್ತಿದೆ. ಅಲ್ಲದೆ ಶೌಚಾಲಯದಲ್ಲಿ ಸ್ವಚ್ಛತೆ ಇಲ್ಲ, ಗಬ್ಬು ನಾರುತ್ತಿವೆ. ರಾತ್ರಿ ವೇಳೆ ಶೌಚಾಲಯದ ಒಳಗಡೆ ಹೋಗಲು ವಿದ್ಯುತ್ ವ್ಯವಸ್ಥೆ ಇಲ್ಲ ಅದರ ಒಳಗಡೆ ಹೋಗಲು ವಿಷಜಂತುಗಳು ಇರುತ್ತವೆ ಎಂದು ಭಯ ಪಟ್ಟು ಯಾರು ಹೋಗುವುದಿಲ್ಲ ಎಂದು ತಿಳಿಸಿದರು.
ಇನ್ನೂ ಶುದ್ಧ ನೀರಿಲ್ಲ, ಮೋಟರ್ ಅಳವಡಿಕೆಯ ನೀರನ್ನೇ ಸೇವಿಸಬೇಕಾಗಿದೆ. ಶಾಲೆ ಮುಗಿದ ನಂತರ 8.9.10 ನೇ ತರಗತಿ ಮಕ್ಕಳಿಗೆ ಸಂಜೆ ಕೆಲ ಶಿಕ್ಷಕರು ನಿಲಯದಲ್ಲಿ ಭೋದನೆ ಮಾಡಲು ಬರುತ್ತಾರೆ ಆದ್ರೆ ಭೋರ್ಡ್ ವ್ಯವಸ್ಥೆ ಇಲ್ಲದೆ ಇರುವುದರಿಂದ ಬಹಳ ಸಮಸ್ಯೆ ಯಾಗುತ್ತಿದೆ ಎಂದರು.
Related Articles
ಕೊಠಡಿಗಳಲ್ಲಿ ಬಟ್ಟೆ ನೇತಕಾಲು ಸರಿಯಾದ ವ್ಯವಸ್ಥೆ ಇಲ್ಲದಾಗಿದೆ. ಬೆಳಿಗ್ಗೆ ಮತ್ತು ಸಂಜೆ ಟೀ ಕೊಡುತ್ತಿಲ್ಲ ಎಂದು ಆರೋಪಿಸಿದರು.
ಮಲಗಲು ಸರಿಯಾಗಿ ಬೆಡ್ ವ್ಯವಸ್ಥೆ ಇಲ್ಲ ಎಲ್ಲಂದರಲ್ಲಿ ತುಂಡು ತುಂಡಾಗಿ ಕಿತ್ತುಹೋಗಿವೆ ಇದರಿಂದ ತಿಗಣಿಗಳ ಕಾಟದಿಂದ ಮಲಗೋಕೆ ಆಗುತ್ತಿಲ್ಲ ಎಂದು ಸಮಸ್ಯೆಗಳನ್ನು ಹಂಚಿಕೊಂಡರು.
ನಿಲಯದ ಅವರಣದ ಮುಂದೆ ಸ್ವಚ್ಛತೆ ಮರೀಚಿಕೆಯಾಗಿದೆ. ಎಲ್ಲಂದರಲ್ಲಿ ತ್ಯಾಜ್ಯ ಹಾಗೂ ನೀರು ಸಂಗ್ರಹಣೆ ಗೊಂಡು ಸಂಜೆ ಸೊಳ್ಳೆಗಳ ಹಾವಳಿ ದಸ್ತಿಯಾಗಿದೆ.
ನಂತರ ತಹಸೀಲ್ದಾರ್ ರಾಘವೇಂದ್ರ ರಾವ್ ಮಾತನಾಡಿ, ನಿಲಯದಲ್ಲಿ ಇಷ್ಟೆಲ್ಲಾ ಸಮಸ್ಯೆಗಳು ಇದ್ರೂ ಮೇಲ್ವಿಚಾರಕರಾಗಲಿ, ಮೇಲಧಿಕಾರಿಗಳಾಗಲಿ ನನಗೆ ಗಮನಕ್ಕೆ ತರದೇ ಇರುವುದು ವಿಪರ್ಯಾಸವಾಗಿದೆ. ಕೂಡಲೇ ಶೌಚಾಲಯದಲ್ಲಿ ವಿದ್ಯುತ್ ದೀಪಾ ಅಳವಡಿಕೆ ಮಾಡಬೇಕು. ಶೌಚಾಲಯ ಸ್ವಚ್ಛತೆ ಕಾಪಾಡಬೇಕು. ಬೆಡ್ ಸಮಸ್ಯೆ ಆದಷ್ಟು ಬೇಗಾ ಬಗೆಹರಿಸಬೇಕು. ಕೊಠಡಿಗಳ ಶಿಥಿಲಾ ವ್ಯವಸ್ಥೆನ್ನು ಸರಿಪಡಿಸಬೇಕು ಎಂದು ನಿಲಯದ ಅಧಿಕಾರಿಗಳಿಗೆ ತಾಕಿತು ಮಾಡಿದರು.
ವಿದ್ಯಾರ್ಥಿಗಳಿಗೆ ಸಂಜೆ ಮತ್ತು ಬೆಳಿಗ್ಗೆ ಕಡ್ಡಾಯವಾಗಿ ಟೀ ಕೊಡಬೇಕು ಎಂದರು.
ಇದಲ್ಲದೆ ಪ್ರತಿ ತಿಂಗಳು ಸೋಪು, ಕೊಬ್ಬರಿ ಹೆಣ್ಣೆಗಳ ಕಿಟ್ ಸರಿಯಾಗಿ ಕೊಡುತ್ತಿದ್ದಾರಾ ಎಂದು ವಿದ್ಯಾರ್ಥಿಗಳನ್ನು ವಿಚಾರಿಸಿದರು.
ಕಳೆದ ತಿಂಗಳ ನೀಡಿದ್ದ ಕಿಟ್ ನ್ನು ಪರಿಶೀಲಿಸಿದರು.
ಇದನ್ನೂ ಓದಿ: ಉಳ್ಳಾಲ ಇನ್ಸ್ ಪೆಕ್ಟರ್ ಇನ್ಸ್ಟಾ ಗ್ರಾಮ್ ಹ್ಯಾಕ್: ನಕಲಿ ಖಾತೆಯಿಂದ ಹಣಕ್ಕಾಗಿ ಬೇಡಿಕೆ