Advertisement

ಆಟೋ ಚಾಲಕನ ಕೊಲೆ: ಐವರ ಬಂಧನ

02:04 PM Jun 15, 2022 | Team Udayavani |

ಕುರುಗೋಡು:  ಜೂ.11 ರಂದು ತೋರಣಗಲ್ಲು ಗ್ರಾಮದ ಆಟೋ ಚಾಲಕ ಶ್ರೀನಿವಾಸ್ (45) ಎಂಬಾತನನ್ನು ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಯ ಸುರಂಗ ಮಾರ್ಗದಲ್ಲಿ ಕೊಲೆ ಮಾಡಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಕುಡತಿನಿ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ತೋರಣಗಲ್ಲು ಸ್ಟೇಷನ್ ನಿವಾಸಿಗಳಾದ ವಸಂತ ಕುಮಾರ್, ವೆಂಕಟಸ್ವಾಮಿ, ಹಸೆನ್, ಹರೀಶ್ ಹಾಗೂ ವಡ್ಡು ಗ್ರಾಮದ ತಿಪ್ಪರೆಡ್ಡಿ ಬಂಧಿತ ಆರರೋಪಿಗಳು. ಕೃತ್ಯಕ್ಕೆ ಬಳಸಿದ್ದ ಮಹಿಂದ್ರಾ ಸ್ಕಾರ್ಪಿಯೋ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:ಕುಣಿಗಲ್: ನಿಂತಿದ್ದ ಟ್ಯಾಂಕರ್ ಗೆ ಬೈಕ್ ಢಿಕ್ಕಿಯಾಗಿ ಮೈಸೂರಿನ ಯುವಕ ಸಾವು

ಎಎಸ್ಪಿ ಗುರುನಾಥ್ ಮತ್ತೂರು, ಡಿ ವೈಎಸ್ಪಿ. ಎಸ್. ಎಸ್ ಕಾಶಿ, ಮಾರ್ಗದರ್ಶನದಲ್ಲಿ ಸಿಪಿಐ ಚಂದನ್ ಗೋಪಾಲ್ ನೇತೃತ್ವದಲ್ಲಿ ಪಿಎಸ್ ಐ ಅಮರೇಗೌಡ, ತೋರಣಗಲ್ಲು ಪಿಎಸ್ ಐ  ಕಾಳಿಂಗ  ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ತಂಡದ ಕಾರ್ಯ ಶ್ಲಾಘಿಸಿರುವ ಜಿಲ್ಲಾ ವರಿಷ್ಟಾಧಿಕಾರಿ ಸೈದುಲ್ ಅದಾವತ್ ಬಹುಮಾನ ಘೋಷಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next