Advertisement

ಕುರುಬರ ಸಂಘದ ಚುನಾವಣೆ ಶಾಂತಿಯುತ

03:25 PM Dec 23, 2019 | Suhan S |

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕರ ಸ್ಥಾನಕ್ಕೆ ವರ್ಷಗಳ ಅವಧಿಯ ಆಡಳಿತ ಮಂಡಲಿಗೆ ಚುನಾವಣೆಯು ಶಾಂತಿಯುತ  ಮತದಾನವಾಗಿದೆ.

Advertisement

ತಾಲೂಕಿನ ಚಪ್ಪರದ ಕಲ್ಲು ಸರ್ಕಲ್‌ನಲ್ಲಿರುವ ವಿಹಾನ್‌ ಪಬ್ಲಿಕ್‌ ಶಾಲೆಯಲ್ಲಿ ದೇವನಹಳ್ಳಿ, ನೆಲಮಂಗಲ, ದೊಡ್ಡ ಬಳ್ಳಾಪುರ , ಹೊಸಕೋಟೆ ತಾಲೂಕಿನ ಕುರುಬರ ಸಂಘದ ಸದಸ್ಯರು ಮತದಾನ ಮಾಡಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 4 ಸಾವಿರದ 382 ಮತದಾರರನ್ನು ಹೊಂದಿದ್ದು ಮೂವರು ನಿರ್ದೇಶಕರನ್ನು ಆಯ್ಕೆ ಮಾಡಿ ರಾಜ್ಯ ಸಂಘ‌ಕ್ಕೆಆಯ್ಕೆ ಮಾಡಿ ಕಳುಹಿಸಿಕೊಡಬೇಕಾಗಿದೆ. ಸಾಮಾನ್ಯ ಸ್ಥಾನದಿಂದ ಏಳು ಅಭ್ಯರ್ಥಿಗಳು ಕಣದಲ್ಲಿದ್ದು ಅಭ್ಯರ್ಥಿಗಳಾದ ಉಮೇಶ್‌, ಕೃಷ್ಣ ಮೂರ್ತಿ, ಕೇಶವ ಮೂರ್ತಿ, ಬೀರೇಗೌಡ, ಮಲ್ಲೇಶ್‌, ಕೆಸಿ ಲಕ್ಷ್ಮೀ ನಾರಾಯಣ್‌ , ಬಿಎಸ್‌ ಲೋಕೇಶ್‌, ಮಹಿಳಾ ಮೀಸಲು ಸ್ಥಾನಕ್ಕೆ ಮೀನಾಕ್ಷಿ ಕೃಷ್ಣ ಮೂರ್ತಿ, ಎನ್‌ ಮಂಜುಳಾ, ಸ್ಪರ್ಧಿಸಿದ್ದಾರೆ. ಬೆಳಿಗ್ಗೆ 09 ರಿಂದ ಪ್ರಾರಂಭವಾದ 04 ಗಂಟೆಯವರೆಗೆ ಚುನಾವಣೆ ನಡೆಯಿತು.

ಮತದಾನ ಪ್ರಾರಂಭವಾದ  ಮೇಲೆ ಅತಿ ಹೆಚ್ಚು ಸದಸ್ಯ ಮತದಾರರ ಬಂದಿದ್ದರಿಂದ ಒಂದು ಕಿ.ಮೀ ವರೆಗೆ ಸಾಲು ಗಟ್ಟಿ ಮತದಾರರು ನಿಂತಿದ್ದರು. 06 ಬೂತ್‌ ಗಳನ್ನು ನಿಯೋಜಿಸಲಾಗಿತ್ತು ಎಂದು ಚುನಾವಣಾಧಿಕಾರಿ ರಾಮಾಂಜನೇಯ ತಿಳಿಸಿದರು.ಅಭ್ಯರ್ಥಿಗಳ ಪರವಾಗಿ ಮತ ಹಾಕುವಂತೆ ಮನವಿ ಮಾಡಲಾಗುತ್ತಿತ್ತು.ಚುನಾವಣೆ ನಡೆಯುವ ಸ್ಥಳದಲ್ಲಿ ಕಂಬಳಿಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬಂತು ಒಂದು ಕಂಬಳಿಗೆ 1,100 ರಿಂದ 1200 ರೂ. ವರೆಗೆ ಚ್ಯಾಪಾರ ಮಾಡುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next