ಭೋಪಾಲ್: ನಮೀಬಿಯಾದಿಂದ ಭಾರತಕ್ಕೆ ಬಂದ ಹೆಣ್ಣು ಚೀತಾಗಳ ಪೈಕಿ ಆಶಾ ಚೀತಾ ನ.29ರಂದು ಮೊದಲ ಬಾರಿಗೆ ಬೇಟೆಯಾಡಿದೆ. ಈ ಮೂಲಕ ತನ್ನ ಆಹಾರವನ್ನು ತಾನೇ ಸಂಪಾದಿಸಿದೆ.
Advertisement
ನಮೀಬಿಯಾದಿಂದ ಸೆ.17ರಂದು ಮಧ್ಯಪ್ರದೇಶದ ಕೂನೊ ನ್ಯಾಷನಲ್ ಪಾರ್ಕ್‌ಗೆ ಎಂಟು ಚೀತಾಗಳು ಆಗಮಿಸಿತು. ಈ ಪೈಕಿ ಒಂದು ಹೆಣ್ಣು ಚೀತಾಗೆ ಪ್ರಧಾನಿ ನರೇಂದ್ರ ಮೋದಿ ಅವರು “ಆಶಾ’ ಎಂದು ನಾಮಕರಣ ಮಾಡಿದ್ದರು.
ನಮೀಬಿಯಾದಿಂದ ಬಂದ ನಂತರ 123 ದಿನಗಳ ಕಾಲ ಆಶಾ ಚೀತಾ ಅನ್ನು ಕ್ವಾರೆಂಟೈನ್‌ನಲ್ಲಿ ಇಡಲಾಗಿತ್ತು. ನ.27ರಂದು ಅದನ್ನು ಕೂನೊ ನ್ಯಾಷನಲ್ ಪಾರ್ಕ್‌ಗೆ ಸೇರಿದ ಕಾಡಿಗೆ ಬಿಡಲಾಗಿತ್ತು.