Advertisement
ಹಾಳಾದ್ದನ್ನು ದುರಸ್ತಿ ಮಾಡಿಲ್ಲರಾಜ್ಯ ಸರಕಾರದ ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿಯಲ್ಲಿ ಕುರ್ಕಾಲು ಪಂಚಾಯತ್ ವ್ಯಾಪ್ತಿಯ ಕುಂಜಾರುಗಿರಿ ಯಲ್ಲಿ ಉಡುಪಿಯ ಕೆ. ಆರ್. ಐ. ಡಿ. ಎಲ್. ಇಲಾಖೆ ಈ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದೆ. 2 ರೂ. ನಾಣ್ಯವನ್ನು ಬಳಸಿ 20 ಲೀಟರ್ ಶುದ್ಧ ಕುಡಿಯುವ ನೀರನ್ನು ಪಡೆಯುವ ಈ ಯೋಜನೆಯನ್ನು ಹೊಂದಿರುವ ಘಟಕವು ಹೆಚ್ಚು ದಿನ ಕಾರ್ಯಾಚರಿಸಿಲ್ಲ. ಕೈಕೊಟ್ಟ ಅನಂತರ ಈವರೆಗೂ ದುರಸ್ತಿ ಕಂಡಿಲ್ಲ. ಹಾಳಾದ ಬಿಡಿ ಭಾಗವನ್ನು ಬದಲಾಯಿಸಿ ಘಟಕವನ್ನು ಸುಸಜ್ಜಿತಗೊಳಿಸಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಈ ಕಡು ಬೇಸಗೆಯ ಸಂದರ್ಭವೂ ನೀರಿನ ಘಟಕದ ಯಂತ್ರ ಸರಿಪಡಿಸುವ ಕೆಲಸ ಕಾರ್ಯಕ್ಕೆ ಮೀನ ಮೇಷ ಎಣಿಸುತ್ತಿದ್ದಾರೆ. ಹಾಳಾದ ಬಿಡಿಭಾಗಕ್ಕೆ ಕಂಪೆನಿ ವಾರಂಟಿ ಅವಧಿಯೊಳಗೆ ಹೊಸದಾಗಿ ಬಿಡಿಭಾಗವನ್ನು ಅಳವಡಿ ಸುವುದಾದರೆ ಇಷ್ಟೊಂದು ಕಾಲಾವಕಾಶ ಬೇಕೆ ಎಂಬ ಪ್ರಶ್ನೆ ಬಳಕೆದಾರರದ್ದು, ಹಾಳಾದ ಬಿಡಿಭಾಗವನ್ನು ಅಲ್ಲಿಂದಲ್ಲಿಗೇ ದುರಸ್ತಿ ಮಾಡಿ ಅಳವಡಿಸುವ ಹುನ್ನಾರ ಗುತ್ತಿಗೆದಾರರಧ್ದೋ ಎಂಬ ಶಂಕೆ ಬಲವಾಗಿ ಮೂಡಿಬರುತ್ತಿದೆ ಎನ್ನುತ್ತಾರೆ ಸ್ಥಳೀಯ ಜನಪ್ರತಿನಿಧಿಗಳು. ಕೂಡಲೇ ದುರಸ್ತಿ
ಘಟಕದಲ್ಲಿ ವೋಲ್ಟೆàಜ್ ಸಮಸ್ಯೆ ಇತ್ತು. ಆ ಕಾರಣದಿಂದ ಮೋಟಾರ್‌ನಲ್ಲಿ ತೊಂದರೆ ಕಾಣಿಸಿಕೊಂಡಿದೆ. ಕೂಡಲೇ ಸರಿಪಡಿಸಲಾಗುತ್ತದೆ.
-ಧೀರಜ್, ಏರಿಯಾ ಎಂಜಿನಿಯರ್
Related Articles
ಘಟಕ ಹಾಳಾದ ಕೂಡಲೇ ಸಂಬಂಧಪಟ್ಟ ಎಂಜಿನಿಯರ್ ಅವರ ಗಮನಕ್ಕೆ ತರಲಾಗಿದೆ. ಕೂಡಲೇ ಸರಿಪಡಿಸುವ ಭರವಸೆ ನೀಡಿದ್ದಾರೆ.
– ಚಂದ್ರಕಲಾ, ಪಿ.ಡಿ.ಒ. ಕುರ್ಕಾಲು ಗ್ರಾ.ಪಂ.
Advertisement
ಕೂಡಲೇ ದುರಸ್ತಿಗೊಳಿಸಿಸ್ಥಳೀಯ ಗ್ರಾ.ಪಂ. ಸದಸ್ಯ ನಾಗೇಂದ್ರ ಅವರು ಹೇಳುವಂತೆ 2019ರ ಫೆ.4 ರಂದು ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆಯಾಗಿ ಕೇವಲ 15 ದಿನ ಕಾರ್ಯಾಚರಿಸಿದೆ. ಹಲವಾರು ಕುಟುಂಬಗಳಿಗೆ ಪ್ರಯೋಜನಕಾರಿಯಾದ ಈ ಶುದ್ಧ ಕುಡಿಯುವ ನೀರಿನ ಘಟಕ ಕೈ ಕೊಟ್ಟಿದೆ. ಕೂಡಲೇ ಸಂಬಂಧಿತ ಅಧಿಕಾರಿ ಎಚ್ಚೆತ್ತು ಈ ಯೋಜನೆಯು ಜನಪರವಾಗಿ ದೀರ್ಘಕಾಲ ಬಳಕೆಗೆ ಬರುವಂತೆ ಜವಾಬ್ದಾರಿಯುತವಾಗಿ ನಿರ್ವಹಣೆ ಮಾಡಲಿ. ಚುನಾವಣಾ ಕರ್ತವ್ಯಕ್ಕೆ ಬಂದವರಿಗೂ ಶುದ್ಧ ಕುಡಿಯುವ ನೀರು ಲಭಿಸಿಲ್ಲ. ದುರಸ್ತಿಗೆ ಇಷ್ಟೊಂದು ಸಮಯ ಬೇಕೇ? ಎಂದು ಅವರು ಪ್ರಶ್ನಿಸುತ್ತಾರೆ.