ಕುಣಿಗಲ್: ಪುರಸಭೆ ಮಾಜಿ ಅಧ್ಯಕ್ಷೆ ಪತಿಗೆ ದುಷ್ಕರ್ಮಿಗಳು ಚಾಕು ತೋರಿಸಿ ಬೆದರಿಸಿ ಚಿನ್ನದ ಚೈನ್ ಹಾಗೂ ಮೊಬೈಲ್ ಕಸಿದುಕೊಂಡು ಪರಾರಿಯಾಗುರುವ ಘಟನೆ ಪಟ್ಟಣದ ಚಿಕ್ಕಕೆರೆ ರೈಲ್ವೆ ಬಿಡ್ಜ್ ತೋಟದ ಬಳಿ ನಡೆದಿದೆ.
ಪಟ್ಟಣದ ಕೆಆರ್ ಎಸ್ ಆಗ್ರಹಾರ ನಿವಾಸಿ ಪುರಸಭೆ ಮಾಜಿ ಅಧ್ಯಕ್ಷೆ ನಳಿನಾ ಅವರ ಪತಿ ಬೈರಪ್ಪ ಚಿನ್ನದ ಚೈನ್ ಹಾಗೂ ಮೊಬೈಲ್ ಕಳೆದುಕೊಂಡ ವ್ಯಕ್ತಿ.
ಘಟನೆ ವಿವರ: ಮಂಗಳವಾರ ರಾತ್ರಿ ಸುಮಾರು 9 ಗಂಟೆಗೆ ಬೈರಪ್ಪ ಅವರು ತಮ್ಮ ತೋಟ ನೋಡಿಕೊಂಡು ಮನೆಗೆ ಹೋಗುತ್ತಿರುವಾಗ ಬೈಕ್ ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಬೈರಪ್ಪ ಅವರನ್ನು ಅಡ್ಡಗಟ್ಟಿ ಚಾಕುವಿನಿಂದ ಬೆದರಿಸಿ ಅವರ ಕತ್ತಿನಲ್ಲಿದ್ದ 60 ಗ್ರಾಂ ಚಿನ್ನದ ಚೈನ್ ಹಾಗೂ ಮೊಬೈಲ್ ಕಸಿದುಕೊಂಡರು.
ಅದೇ ಸಮಯಕ್ಕೆ ತಂದೆಯನ್ನು ಹುಡುಕಿಕೊಂಡು ಬಂದ ಮಗನನ್ನು ನೋಡಿದ ದುಷ್ಕರ್ಮಿಗಳು ಬೈಕ್ ಅನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.
Related Articles
ಪ್ರಕರಣದ ಕುರಿತು ಕುಣಿಗಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ಅವರ ಪತ್ನಿ, ಮಾಜಿ ಪುರಸಭಾ ಅಧ್ಯಕ್ಷೆ ನಳಿನಾ ತಿಳಿಸಿದ್ದಾರೆ.